More

    ಜನರ ನಿಯಂತ್ರಣಕ್ಕೆ ಕಠಿಣ ಕ್ರಮ ಅಗತ್ಯ

    ತಹಸೀಲ್ದಾರ್‌ಗೆ ಖಾಸಗಿ ವೈದ್ಯರು ಸಲಹೆ | ವೈದ್ಯಕೀಯ ಸಂಘದ ಸದಸ್ಯರ ಸಭೆ

    ಕಾರಟಗಿ: ಕರೊನಾ ಮಹಾಮಾರಿ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ತಾಲೂಕಾದ್ಯಂತ ಅನಗತ್ಯವಾಗಿ ಓಡಾಡುವ ಜನರನ್ನು ನಿಯಂತ್ರಿಸಲು ತಾಲೂಕಾಡಳಿತ ಕಠಿಣ ಕ್ರಮಗಳನ್ನು ಅನುಸರಿಸಬೇಕು ಎಂದು ತಹಸೀಲ್ದಾರ್‌ಗೆ ಖಾಸಗಿ ವೈದ್ಯರು ಸಲಹೆ ನೀಡಿದರು.

    ತಾಲೂಕಾದ್ಯಂತ ಕೈಗೊಳ್ಳಬೇಕಾದ ಅಗತ್ಯ ಕ್ರಮದ ಕುರಿತು ಪಟ್ಟಣದ ತಹಸೀಲ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಭಾರತೀಯ ವೈದ್ಯಕೀಯ ಸಂಘದ ಸದಸ್ಯರ ಸಭೆಯಲ್ಲಿ ವೈದ್ಯರು ಸಲಹೆ ನೀಡಿದರು.

    ಲಾಕ್‌ಡೌನ್ ಪರಿಣಾಮಕಾರಿಯಾಗಿ ಜಾರಿಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಅಪಾಯ ಎದುರಾಗಲಿದೆ. ಸಾರ್ವಜನಿಕರಿಗೆ ಸ್ವಲ್ಪ ಸಮಸ್ಯೆಯಾಗಬಹುದು. ಆದರೂ, ಇದು ಅನಿವಾರ್ಯ. ಪ್ರತಿ ನಿತ್ಯ ಪಟ್ಟಣದ ನವಲಿ ವೃತ್ತ ಮತ್ತು ಹಳೇ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಜನ ಸೇರುತ್ತಾರೆ. ಎಲ್ಲಿಯೂ ಲಾಕ್‌ಡೌನ್ ಆದೇಶ ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ಕಿರಾಣಿ ಹಾಗೂ ನ್ಯಾಯಬೆಲೆ ಅಂಗಡಿಗಳ ಮುಂಭಾಗ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

    ತಹಸೀಲ್ದಾರ್ ಆರ್.ಕವಿತಾ ಮಾತನಾಡಿ, ತಾಲೂಕಾದ್ಯಂತ ಲಾಕ್‌ಡೌನ್ ಆದೇಶವನ್ನು ಕಂದಾಯ, ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದೆ. ಕೇವಲ ಇಲಾಖೆಗಳು ಮಾತ್ರ ಇದಕ್ಕೆ ಶ್ರಮಿಸಿದರೆ ಸಾಲದು ನಮ್ಮ ಜತೆಗೆ ಖಾಸಗಿ ವೈದ್ಯರು ಹಾಗೂ ಸಾರ್ವಜನಿಕರು ಕೈ ಜೋಡಿಸಬೇಕು. ಪಟ್ಟಣದಲ್ಲಿ ಖಾಸಗಿ ಆಸ್ಪತ್ರೆಗಳು ಮುಚ್ಚದೆ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಸರ್ಕಾರ ನಿಮಗೆ ಸಮಸ್ಯೆಯಾಗದ ರೀತಿ ಸಹಕಾರ ನೀಡಲಿದೆ ಎಂದರು.

    ಸರ್ಕಾರಿ ವೈದ್ಯಾಧಿಕಾರಿ ಶಕುಂತಲಾ ಪಾಟೀಲ್, ಹಿರಿಯ ವೈದ್ಯರಾದ ಎಸ್.ಬಿ.ಶೆಟ್ಟರ್, ಎಂ.ಐ.ಮುದುಗಲ್, ಮಧುಸೂಧನ್ ಹುಲಗಿ, ವಿಜಯಮಹಾಂತೇಶ ಪುರ್ತಗೇರಿ, ಭಾವಿ, ಅಶೋಕ್‌ಬಾಬು, ಹರಿ, ಉಪತಹಸೀಲ್ದಾರ್ ಮಲ್ಲಿಕಾರ್ಜುನ್, ಕಂದಾಯ ನಿರೀಕ್ಷಕ ಸುರೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts