More

    ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡಿ: ಈಳಿಗನೂರು ಗ್ರಾಮಸ್ಥರ ಒತ್ತಾಯ

    ಕಾರಟಗಿ: ಗ್ರಾಮದ ಹಳ್ಳದ ನೀರಿಗೆ ಸಿಕ್ಕು ಮೃತಪಟ್ಟ ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಗ್ರೇಡ್-2 ತಹಸೀಲ್ದಾರ್ ಎಂ.ವಿಶ್ವನಾಥ ಹಾಗೂ ತಾಪಂ ಇಒ ಡಾ.ಡಿ.ಮೋಹನ್‌ಗೆ ಈಳಿಗನೂರು ಗ್ರಾಮಸ್ಥರು ಗುರುವಾರ ಮನವಿ ಸಲ್ಲಿಸಿದರು.

    ಬಸವರಾಜ ಬಡಿಗೇರ್ ಅವರ ಪುತ್ರ ನಂದಕುಮಾರ್ ಕಾಲುಜಾರಿ ಬಿದ್ದು ಹಳ್ಳದ ಪೈಪ್‌ನಲ್ಲಿ ಸಿಕ್ಕಿಕೊಂಡು ಮೃತಪಟ್ಟಿದ್ದಾನೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಮಧ್ಯೆ ಹಳ್ಳ ಹಾದುಹೋಗಿದ್ದು, ತಡೆಗೋಡೆ ನಿರ್ಮಿಸಿಲ್ಲ. ನೀರು ಹರಿಯುವ ಪೈಪ್‌ಗಳ್ಲಲಿ ಜಾಲಿ ಆವರಿಸಿಕೊಂಡಿದೆ. ಸಿದ್ದಾಪುರ-ನಂದಿಹಳ್ಳಿ ರಸ್ತೆಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ತಗ್ಗುದಿನ್ನೆಗಳು ಬಿದ್ದಿವೆ. ಗ್ರಾಮದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಕೃಷಿಕರು ಇದೇ ರಸ್ತೆ ಮೂಲಕ ದಿನ ಓಡಾಡುತ್ತಾರೆ. ಕೂಡಲೇ ರಸ್ತೆ ಅಭಿವೃದ್ಧಿಗೊಳಿಸುವ ಜತೆ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಬೇಕು. ಮೃತ ಬಾಲಕನ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಗ್ರಾಮಸ್ಥರಾದ ಶಿವಕುಮಾರ, ಶರಣಪ್ಪ ಹೊಸಮನಿ, ಮಾರುತಿ, ರಾಜೇಶ, ಮೃತ್ಯುಂಜಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts