More

    ಕಾನೂನು ಗೌರವಿಸಿದರೆ ಸಮಾಜದಲ್ಲಿ ಸ್ವಾಸ್ಥ್ಯ, ತ್ಯಾಮಗೊಂಡ್ಲಲ್ಲಿ ಡಿವೈಎಸ್‌ಪಿ ಮೋಹನ್‌ಕುಮಾರ್ ಅಭಿಮತ

    ತ್ಯಾಮಗೊಂಡ್ಲು: ಸರ್ಕಾರ ಹಾಗೂ ಸಂವಿಧಾನ ನಿಗದಿಪಡಿಸಿದ ಕಾನೂನನ್ನು ಪ್ರತಿಯೊಬ್ಬರೂ ಗೌರವಿಸಿದಾಗ ಮಾತ್ರ ಸಮಾಜದಲ್ಲಿ ಎಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಡಿವೈಎಸ್‌ಪಿ ಮೋಹನ್‌ಕುಮಾರ್ ಹೇಳಿದರು.

    ಹೋಬಳಿಯ ಮುದ್ದಲಿಂಗನಹಳ್ಳಿಯಲ್ಲಿರುವ ಶ್ರೀಕರ ಕಲ್ಯಾಣ ಮಂಟಪದಲ್ಲಿ ತ್ಯಾಮಗೊಂಡ್ಲು ಪೊಲೀಸ್ ಠಾಣೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.

    ಸುಪ್ರೀಂ ಕೋರ್ಟ್ ಆದೇಶದಂತೆ ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಕರ ಸಾಗಣೆ ಕಾನೂನು ಬಾಹಿರ, ನಿಗದಿತ ಸಾಮರ್ಥ್ಯದಂತೆ ಮಾತ್ರ ಪ್ರಯಾಣಿಕರನ್ನು ಆಟೋಗಳಲ್ಲಿ ಪ್ರಯಾಣಿಸಬೇಕು, ಇತ್ತೀಚೆಗೆ ಅಪಘಾತದಲ್ಲಿ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಯುವಜನತೆ ವೇಗಕ್ಕೆ ಮನಸೋತು ಆಸ್ಪತ್ರೆ ಪಾಲಾಗುತ್ತಿದ್ದಾರೆ. ಅಪ್ರಾಪ್ತರಿಗೆ ವಾಹನ ಚಾಲನೆಗೆ ನೀಡುವ ಪಾಲಕರು ಕಾನೂನಿನನ್ವ ತಪ್ಪಿತಸ್ಥರು ಹಾಗೂ ಪಾಲಕರೇ ಶಿಕ್ಷೆಗೆ ಗುರಿಯಾಗುತ್ತಾರೆ ಎನ್ನುವುದನ್ನು ಅರಿಯಬೇಕು ಎಂದು ಹೇಳಿದರು.

    ಜ್ಞಾನಧಾಮ ಶಾಲೆಯ ವಿದ್ಯಾರ್ಥಿಗಳಾದ ಅಕ್ಷಯ್ ಮತ್ತು ಸಿಂಧು ಅಪಘಾತದ ಸಮಯದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಬಗ್ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು. ತ್ಯಾಮಗೊಂಡ್ಲು ಗ್ರಾಮಸ್ಥರು, ಪಟ್ಟಣದ ಮುಖ್ಯ ರಸ್ತೆಯಲ್ಲಿ ಅತಿಯಾದ ವಾಹನಗಳಿಂದ ಆಗುತ್ತಿರುವ ಅನನುಕೂಲ ಮತ್ತು ರಸ್ತೆ ವಿಸ್ತರಣೆಗೆ ಒತ್ತು ನೀಡಲು ಆಗ್ರಹಿಸಿದರು.

    ತ್ಯಾಮಗೊಂಡ್ಲು ಪೊಲೀಸ್ ಠಾಣೆಯ ಪಿಎಸ್‌ಐ ಕೃಷ್ಣಕುಮಾರ್, ಎಎಸ್‌ಐ ಸಿದ್ದಪ್ಪ, ವೆಂಕಟೇಶ್, ಅಜ್ಜಣ್ಣ, ಜಗದೀಶ್, ರಾವ್, ರಾಜೇಶ್, ಹಾದಿಮನಿ, ಡೇರಿ ನೌಕರರ ಜಿಲ್ಲಾಧ್ಯಕ್ಷ ಗಂಗಾಧರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts