More

    ದೇವನಹಳ್ಳಿ ಜಿಲ್ಲಾ ಕೇಂದ್ರವಾಗಲಿ

    ವಿಜಯವಾಣಿ ಸುದ್ದಿಜಾಲ ವಿಜಯಪುರ
    ಕನ್ನಡದಲ್ಲಿಯೇ ಮಾತನಾಡುವುದು, ವ್ಯವಹರಿಸುವುದು ರಾಜ್ಯದಲ್ಲಿ ಕಡ್ಡಾಯವಾಗಬೇಕು ಎಂದು ಸಾರ್ವಜನಿಕ ಸಂಪರ್ಕ ಕೇಂದ್ರದ ಸಂಸ್ಥಾಪಕ ಟಿ.ಎಮ್.ಸಹದೇಶ್ ಆಶಿಸಿದರು.
    ನಗರದ ಅಂಕತಟ್ಟಿ ನಂಜುಂಡಪ್ಪ ವೃತ್ತದ ಒಕ್ಕಲಿಗರ ಬೀದಿಯ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ದೇವನಹಳ್ಳಿಯೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವಾಗಬೇಕು. ದೇವನಹಳ್ಳಿಯು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನಂದಿ ಬೆಟ್ಟ, ಐತಿಹಾಸಿಕ ವೇಣುಗೋಪಾಲ ಸ್ವಾಮಿ ದೇವಸ್ಥಾನ, ಕೋಟೆ, ಟಿಪ್ಪು ಸುಲ್ತಾನ್ ಜನ್ಮಸ್ಥಳ ಸೇರಿದಂತೆ ಹತ್ತಾರು ಪ್ರವಾಸಿ ತಾಣಗಳಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಆದ್ದರಿಂದ ಸರ್ಕಾರ, ಜಿಲ್ಲಾ ಕೇಂದ್ರವಾಗಿ ೋಷಿಸಬೇಕು ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಿದ್ದು, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಹೊಲಿಗೆ, ಬ್ಯೂಟಿ ಪಾರ್ಲರ್ ಸೇರಿ 18 ತೆರನಾದ ಕೌಶಲಗಳ ತರಬೇತಿ ಪಡೆಯಬಹುದು. ದೇವನಹಳ್ಳಿ ತಾಲೂಕಿನಿಂದ 500 ಅರ್ಜಿಗಳು ಸಲ್ಲಿಕೆಯಾಗುವ ನಿರೀಕ್ಷೆ ಇತ್ತು. ಆದರೆ ಈವರೆಗೂ ಕೇವಲ 200 ಅರ್ಜಿ ಮಾತ್ರ ಸಲ್ಲಿಕೆಯಾಗಿವೆ. ದೇವರಾಜು ಅರಸು ನಿಗಮದಿಂದ, ಪರಿಶಿಷ್ಟ ಜಾತಿಯವರಿಗೆ ಅಂಬೇಡ್ಕರ್ ನಿಗಮದಿಂದ, ಪರಿಶಿಷ್ಟ ವರ್ಗದವರಿಗೆ ವಾಲ್ಮೆಕಿ ನಿಗಮದಿಂದ ವಿವಿಧ ಸಾಲ-ಸೌಲಭ್ಯಗಳು ಲಭ್ಯವಿದ್ದು, ಮಾಹಿತಿ ಕೊರತೆಯಿಂದ ಬಹುತೇಕರು ಯೋಜನೆಗಳಿಂದ ವಂಚಿತರಾಗುತ್ತಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts