More

    ನಾಡೋಜ ಡಾ. ಮಹೇಶ ಜೋಶಿ ಹೇಳಿಕೆ; ನಾನು ಸಿಎಂ ಮನೆ ಬಾಗಿಲ ಕಾಯುವ ಅಧ್ಯಕ್ಷನಲ್ಲ

    ಧಾರವಾಡ: ಕನ್ನಡ ಸಾಹಿತ್ಯ ಪರಿಷತ್‌ಗೆ ಅದರದೆ ಆದ ಘನತೆ, ವಿಶ್ವಾಸ ಇದೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಲು ಹಿಂಜರಿಯುತ್ತಿದೆ. ಕಸಾಪ ಅಧ್ಯಕ್ಷರು ಕಾಗದ ಬರೆದರೆ ಅದಕ್ಕೆ ಉತ್ತರ ಬರುತ್ತಿಲ್ಲ. ಎಲ್ಲರಂತೆ ನಾನು ಸಿಎಂ ಮನೆ ಬಾಗಿಲ ಕಾಯುವ ಅಧ್ಯಕ್ಷನಲ್ಲ. ಕಸಾಪಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದರು.
    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನಕ್ಕೆ ೨೫ ಕೋಟಿ ರೂಪಾಯಿ ಅನುದಾನ ನಿಗದಿಗೆ ಕೇಳಿದ್ದೆ. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉತ್ತರ ಬರಲಿಲ್ಲ. ಕಾರ್ಯಕಾರಿ ಸಮಿತಿ ಭೇಟಿಗೆ ಅವಕಾಶ ನೀಡಲಿಲ್ಲ. ಬೇರೆ ಸಾಹಿತಿಗಳ ಭೇಟಿಗೆ ಸಮಯಾವಕಾಶ ಕೊಡುತ್ತಾರೆ. ಅವರೊಂದಿಗೆ ವೈಯಕ್ತಿಕವಾಗಿ ಹಿತಕರ ಬಾಂಧವ್ಯ ಇದೆ. ಆದರೂ ೩ ಬಾರಿ ಭೇಟಿಗೆ ಅವಕಾಶ ಕೇಳಿದರೂ ಸಿಕ್ಕಿಲ್ಲ. ಒಮ್ಮೆ ದಿನಾಂಕ ನಿಗದಿ ಮಾಡಿ ತಪ್ಪಿಸಿದರು. ಹೀಗಾಗಿ ಎಲ್ಲೋ ಒಂದು ಕಡೆ ಪರಿಷತ್ ಅನ್ನು ಕಡೆಗಣಿಸುತ್ತಿದ್ದಾರೆ ಎನಿಸುತ್ತಿದೆ ಎಂದರು.
    ನಾನು ಬಿಜೆಪಿ ಅಭ್ಯರ್ಥಿಯಾಗಿರಲಿಲ್ಲ. ಬಿಜೆಪಿ ಸದಸ್ಯನೂ ಅಲ್ಲ. ಈ ಊಹಾಪೋಹ ಸರಿಯಲ್ಲ. ಸಾಹಿತ್ಯ ಪರಿಷತ್ ದೃಷ್ಟಿಯಲ್ಲಿ ಇದು ಕನ್ನಡದ ಸರ್ಕಾರ. ನಾನು ಎಡಪಂಥ- ಬಲಪಂಥೀಯ ಅಲ್ಲ, ಕನ್ನಡ ಪಂಥದವನು. ನನಗೆ ಕನ್ನಡ ಮುಖ್ಯ. ಸಿದ್ದರಾಮಯ್ಯ ಹಳೇ ಮೈಸೂರಿನವರು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದವರು. ಕಸಾಪ ಹುಟ್ಟು, ಅದರ ಮಹತ್ವ ಅವರಿಗೆ ಗೊತ್ತಿದೆ. ಕರ್ನಾಟಕ ಏಕೀಕರಣ ಹೋರಾಟದ ಅರಿವಿದೆ. ಆದಾಗ್ಯೂ ಈ ರೀತಿ ನಡೆದುಕೊಳ್ಳುತ್ತಿರುವುದು ಬೇಸರ ತಂದಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts