More

    ಮುಳ್ಳೂರು ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ


    • ಚಾಮರಾಜನಗರ : 68ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೊಳ್ಳೇಗಾಲ ತಾಲೂಕಿನ ಮುಳ್ಳೂರು ಗ್ರಾಮದ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯದ ನಡೆಗೆ ಶಾಲಾ-ಕಾಲೇಜುಗಳ ಕಡೆಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

    • ಎಂಸಿಕೆಸಿ ಪ್ರೌಢಶಾಲೆಯ ಶಿಕ್ಷಕ ಎ.ಎನ್.ವೆಂಕಟೇಶಮೂರ್ತಿ ಮಾತನಾಡಿ, ಜನಪದ ಸಾಹಿತ್ಯ ಜನಸಾಮಾನ್ಯರ ಸಾಹಿತ್ಯವಾಗಿದೆ. ಇದು ನಮ್ಮ ಮಣ್ಣಿನ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಜನಪದ ಸಾಹಿತ್ಯದ ಗಾದೆ, ಗೀತೆ ಹಾಗೂ ಒಗಟುಗಳು ನಮ್ಮಲ್ಲಿ ಸಂಸ್ಕಾರವನ್ನು ಮೂಡಿಸುವಂತಾಗಬೇಕು ಎಂದು ತಿಳಿಸಿದರು.

    • ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ನಾಗರಾಜು ಕೊಂಗರಹಳ್ಳಿ ಮಾತನಾಡಿ, ಕರುನಾಡಿನಲ್ಲಿ ನಾವು ಹುಟ್ಟಿರುವುದು ನಮ್ಮ ಪುಣ್ಯದ ಫಲ. ಇಲ್ಲಿನ ನೆಲ, ಗಾಳಿ ಪರಿಸರ ನಮಗೆ ಸಂಸ್ಕೃತಿಯನ್ನು ಕಲಿಸುತ್ತದೆ. ವಿದ್ಯಾರ್ಥಿಗಳು ಕನ್ನಡ ಪ್ರೇಮಿಗಳಾಗಬೇಕು. ಅನ್ಯರಿಗೂ ಕನ್ನಡ ಭಾಷೆಯ ಸಿರಿತನವನ್ನು ತಿಳಿಸಿಕೊಡಬೇಕು ಎಂದರು.

    • ಮುಳ್ಳೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎನ್.ಆರ್.ಮಹಾದೇವಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಸಿ. ನಾಗರಾಜು, ಶಿಕ್ಷಕ ಮುರುಗೇಶ್, ಮಮತಾ, ರೇವತಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts