More

    ಮಾದಾಪುರ ಮುರಾರ್ಜಿ ಶಾಲೆಯಲ್ಲಿ ರಾಜ್ಯೋತ್ಸವ

    ಕಿಕ್ಕೇರಿ: ಕನ್ನಡ ನಿತ್ಯೋತ್ಸವವಾಗಲು ವರ್ಷಪೂರ್ತಿ ಕನ್ನಡಮ್ಮನ ನೆನಪಿಸುವ ಕಾರ್ಯಕ್ರಮ ನಡೆಯಬೇಕಿದೆ ಎಂದು ಪ್ರಾಂಶುಪಾಲೆ ಶಾಂತಿ ತಿಳಿಸಿದರು.

    ಹೋಬಳಿಯ ಮಾದಾಪುರ ಮುರಾರ್ಜಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿ ಮನೆ, ಮನದಲ್ಲೂ ಕನ್ನಡ ಬಳಸಿ ಬೆಳೆಸುವ ಕಾರ್ಯವಾಗಬೇಕಿದೆ. ಬದುಕಿಗೆ ಅನ್ಯ ಭಾಷೆಯಾಗಲಿ, ಉಸಿರಿನ ಭಾಷೆ ಕನ್ನಡವಾಗಿರಲಿ ಎಂದರು.

    ಕನ್ನಡ ಶಾಲೆ ಉಳಿಯಲು ಪಾಲಕರ ಸಹಕಾರ ಅಗತ್ಯ. ಉನ್ನತ ಹುದ್ದೆ ಅಲಂಕರಿಸಿರುವ ಬಹುತೇಕರು ಗ್ರಾಮೀಣ ಹಾಗೂ ಮಾತೃಭಾಷೆಯಲ್ಲಿ ವ್ಯಾಸಂಗ ಮಾಡಿದವರು. ಹೆಚ್ಚು ಜ್ಞಾನಪೀಠ ಪ್ರಶಸ್ತಿ ಗಳಿಸಿದ ನಾಡು ನಮ್ಮದು, ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆ ನಮ್ಮದು ಎಂಬ ಹೆಮ್ಮೆ ಪ್ರತಿಯೊಬ್ಬರಲ್ಲೂ ಮೂಡಿದರೆ ಭಾಷೆ, ನಾಡು ಸದೃಢವಾಗಲಿದೆ ಎಂದು ಹೇಳಿದರು.

    ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕರಾದ ಸೌಮ್ಯಾ, ಜಯಲಕ್ಷ್ಮೀ, ಲೀಲಾವತಿ, ಧರಣೇಶ್, ನವೀನ್, ಅನಿತ್‌ಕುಮಾರ್, ರಾಘವೇಂದ್ರ, ಶಿವಸ್ವಾಮಿ, ಜಗದೀಶ್, ಲಕ್ಷ್ಮಣ್, ಉಮೇಶ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts