More

    ಬೆಳೆಗೆ ವೈಜ್ಞಾನಿಕ ಬೆಲೆ ನೀಡದಿರುವುದು ಸರಿಯಲ್ಲ: ಬಿಜೆಪಿ ಮುಖಂಡ ಅರವಿಂದ್ ಬೇಸರ

    ಮಂಡ್ಯ: ಕೆಲವು ಸಕ್ಕರೆ ಕಂಪನಿಗಳ ಮಾಲೀಕರ ಹಿತಕ್ಕಾಗಿ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡದಿರುವುದು ಸಮಂಜಸವಲ್ಲ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಕಳವಳ ವ್ಯಕ್ತಪಡಿಸಿದರು.
    ನಗರದ ಗಾಂಧಿಭವನದಲ್ಲಿ ತಾಯ್ನಾಡು ಕನ್ನಡ ರಕ್ಷಣಾ ವೇದಿಕೆ ಆಯೋಜಿಸಿದ್ದ ೬೭ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕಲಾಪ್ರದರ್ಶನ ಮತ್ತು ಕನ್ನಡರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
    ಕಾಂಗ್ರೆಸ್ ಅಥವಾ ಬಿಜೆಪಿ ಸರ್ಕಾರಗಳ ಅವಧಿಯಲ್ಲಿ ಕೆಲ ಸಕ್ಕರೆ ಕಂಪನಿಗಳ ಮಾಲೀಕರು ಮತ್ತು ಅಧಿಕಾರಸ್ಥರ ಹಿತಕ್ಕಾಗಿ ಸಮಸ್ತ ರೈತರ ಹೊಟ್ಟೆಮೇಲೆ ಹೊಡೆಯುವುದು ಎಷ್ಟು ಸರಿ?. ಸಕ್ಕರೆ ಕಾರ್ಖಾನೆಯಗೆ ಕಬ್ಬು ಸರಬರಾಜಿನಿಂದ ಉಪ ಉತ್ಪನ್ನಗಳಿಂದ ಬರುವ ಅಲ್ಪ ಆದಾಯವನ್ನು ರೈತರಿಗೆ ನೀಡದಿರುವುದು ಶೋಚನೀಯ. ಸರ್ಕಾರಗಳು ಇನ್ನಾದರೂ ಎಚ್ಚೆತ್ತುಕೊಂಡು ರೈತಪರ ನಿಲ್ಲಲಿ, ವೈಜ್ಞಾನಿಕ ಬೆಲೆ ನೀಡಲಿ, ಹೊರರಾಜ್ಯಗಳ ರೈತರಿಗೆ ನೀಡುವಷ್ಟು ಬೆಲೆಯನ್ನಾದರೂ ನೀಡಿ ರಾಜ್ಯದ ರೈತರ ಹೋರಾಟಕ್ಕೆ ತಿಲಾಂಜಲಿ ಹಾಕುವ ವ್ಯವಸ್ಥೆ ಈ ವೇದಿಕೆಯಿಂದ ಆಗ್ರಹಿಸುತ್ತಿದ್ದೇನೆ ಎಂದರು. 

    ರಂಗಭೂಮಿ ಕಲಾವಿದ ಎಸ್.ಸಿ.ಬಸವರಾಜು ಸಂಪಹಳ್ಳಿ, ತಾಯ್ನಾಡು ಕನ್ನಡ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಭೂಮಿಪುತ್ರ ಡಾ. ರಾಜೇಗೌಡ, ಸಾಹಿತಿ ಕಟ್ಟೆ ಎಂ.ಎಸ್.ಕೃಷ್ಣಸ್ವಾಮಿ, ಶಿಕ್ಷಕಿ ಸುಕನ್ಯಸಂಗಳ್, ಕಲಾವಿದ ಎಚ್,ಸಿ.ಮಹೇಶ್‌ಕುಮಾರ್, ಆರ್.ಕೆ.ಸ್ವಾಮಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts