More

    ಕಾರ್ಮಿಕರ ಕಷ್ಟಕ್ಕೆ ಕಲಾವಿದರ ಸ್ಪಂದನೆ; ಹೀಗೊಂದು ವಿಭಿನ್ನ ನಿಧಿ ಸಂಗ್ರಹಣೆ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಕರೊನಾ ಎರಡನೇ ಅಲೆಯಿಂದ ತತ್ತರಿಸಿ ಹೋಗಿರುವ ಕನ್ನಡ ಚಿತ್ರರಂಗದ ಕಾರ್ವಿುಕರಿಗೆ ಉಪೇಂದ್ರ ಸಹಾಯಹಸ್ತ ಚಾಚಿರುವುದು ಗೊತ್ತೇ ಇದೆ. ಈ ನಿಟ್ಟಿನಲ್ಲಿ ಕಾರ್ವಿುಕರ ಹಾಗೂ ತಂತ್ರಜ್ಞರ ಒಕ್ಕೂಟದ ಎಲ್ಲ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಗಳಿಗೆ ದಿನಸಿ ಕಿಟ್​ಗಳನ್ನು ನೀಡುವುದಾಗಿ ಅವರು ಸೋಮವಾರವೇ ಘೋಷಿಸಿದ್ದಾರೆ.

    ಉಪೇಂದ್ರ ಅವರ ಈ ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ, ಮತ್ತಷ್ಟು ಸೆಲೆಬ್ರಿಟಿಗಳು ಮತ್ತು ಜನಸಾಮಾನ್ಯರು ಉಪೇಂದ್ರ ಅವರ ಜತೆಗೆ ಕೈಜೋಡಿಸಿದ್ದಾರೆ. ಕನ್ನಡ ಚಿತ್ರರಂಗದ ಬೇರೆಬೇರೆ ವಲಯಗಳಲ್ಲಿ ದುಡಿಯುತ್ತಿರುವ ಕಾರ್ವಿುಕರಿಗೆ ಮತ್ತು ತಂತ್ರಜ್ಞರಿಗೆ ಉದ್ದೇಶದಿಂದ ಉಪೇಂದ್ರ ಅವರ ಜತೆಗೆ ನಿಂತಿದ್ದಾರೆ. ಪ್ರಮುಖವಾಗಿ ಹಿರಿಯ ನಟಿ ಬಿ. ಸರೋಜಾದೇವಿ ಅವರು ನಾಲ್ಕು ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದ್ದು, ಈ ಹಣವನ್ನು ಸಾಧು ಕೋಕಿಲ ಅವರ ನೇತೃತ್ವದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವವರಿಗೆ ನೀಡಲು ತಿಳಿಸಿದ್ದಾರೆ ಎಂದು ಉಪೇಂದ್ರ ಹೇಳಿದ್ದಾರೆ.

    ಕಳೆದ ಬಾರಿಯ ಲಾಕ್​ಡೌನ್ ಸಮಯದಲ್ಲಿ ಹಲವರಿಗೆ ದಿನಸಿ ಕಿಟ್​ಗಳನ್ನು ಹಂಚಿದ್ದ ಸಾಧು ಕೋಕಿಲ, ಈ ಬಾರಿ ಆರ್ಕೆಸ್ಟ್ರಾ ಕಲಾವಿದರಿಗೆ ಎರಡೂವರೆ ಲಕ್ಷ ರೂ.ಗಳ ಮೊತ್ತದ ದಿನಸಿ ಕಿಟ್​ಗಳನ್ನು ಹಂಚುವುದಕ್ಕೆ ಮುಂದೆ ಬಂದಿರುವುದಾಗಿ ಉಪೇಂದ್ರ ತಿಳಿಸಿದ್ದಾರೆ. ಇದಲ್ಲದೆ ನಟ ಶೋಭರಾಜ್, ನಿರ್ದೇಶಕ ಪವನ್ ಒಡೆಯರ್ ಕ್ರಮವಾಗಿ 10 ಮತ್ತು 20 ಸಾವಿರ ರೂ.ಗಳನ್ನು ಕೊಟ್ಟಿದ್ದು, ಅದನ್ನು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದಕ್ಕೆ ಹೇಳಿದ್ದಾರಂತೆ. ಇದು ಚಿತ್ರರಂಗದವರ ವಿಷಯವಾದರೆ, ಹಲವು ಸಾರ್ವಜನಿಕರು ಸಹ ಉಪೇಂದ್ರ ಅವರ ಕೈಜೋಡಿಸಿದ್ದು, ಸಂತ್ರಸ್ತರಿಗೆ ಕಿಟ್ ವಿತರಿಸುವುದಕ್ಕೆ ಉಪ್ಪಿ ಫೌಂಡೇಶನ್ ಖಾತೆಗೆ ಸ್ವಯಂಪ್ರೇರಿತರಾಗಿ ಹಣವನ್ನು ವರ್ಗಾವಣೆ ಮಾಡಿರುವುದಾಗಿ ಸ್ವತಃ ಉಪೇಂದ್ರ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

    ಹೊಂಬಾಳೆ ಸಂಸ್ಥೆಯಿಂದ 50 ಐಸಿಯು ಹಾಸಿಗೆ: ಹೊಂಬಾಳೆ ಫಿಲಂಸ್​ನ ವಿಜಯ್ಕುಮಾರ್ ಕಿರಗಂದೂರು, ಮಂಡ್ಯ ಜಿಲ್ಲೆಗೆ 50 ಐಸಿಯು ಹಾಸಿಗೆ ಹಾಗೂ 50 ಎಂಎಲ್​ಪಿ ಸಾಮರ್ಥ್ಯದ ಎರಡು ಆಮ್ಲಜನಕ ಘಟಕ ಸ್ಥಾಪನೆಗೆ ನೆರವು ನೀಡಲು ಮುಂದಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts