More

    ಚಿತ್ರದುರ್ಗದಲ್ಲಿ ಮೊಳಗಿತು ಕನ್ನಡ ಡಿಂಡಿಮ…

    ಚಿತ್ರದುರ್ಗ: ಏಕೀಕೃತ ಕರ್ನಾಟಕದ ಸಂಭ್ರಮವನ್ನು ಒಂದು ದಿನಮಟ್ಟಿಗೆ ಆಚರಿಸದೆ, ನಮ್ಮ ಈ ಕನ್ನಡ ಹಬ್ಬವನ್ನು ನಿತ್ಯೋತ್ಸವವನ್ನಾಗಿ ಆಚರಿಸುವಂತಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಆಶಯ ವ್ಯಕ್ತಪಡಿಸಿದರು.

    65ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಏಕೀಕರಣ ಹೋರಾಟಕ್ಕೂ ಚಿತ್ರದುರ್ಗಕ್ಕೂ ಹೆಚ್ಚು ನಂಟಿದೆ ಎಂದರು.

    ರಾಷ್ಟ್ರನಾಯಕ ಎಸ್.ನಿಜಲಿಂಗಪ್ಪ, ಹುಲ್ಲೂರು ಶ್ರೀನಿವಾಸ ಜೋಯಿಸರು, ಆರ್.ಎಚ್.ದೇಶಪಾಂಡೆ, ಬಿಎಂಶ್ರೀ, ಬೆಳಗಲ್ ರಾಮರಾಯರು, ಹೊನ್ನಾಪುರಮಠ, ಆಲೂರು ವೆಂಕಟರಾಯರು, ಕುವೆಂಪು, ಯು.ರಾಮರಾವ್, ಹರ್ಡೇಕರ್ ಮಂಜಪ್ಪ, ಕಾರ್ನಾಡ್, ಸದಾಶಿವರಾವ್ ಮೊದಲಾದ ಮಹನೀಯರ ಹೋರಾಟದ ಫಲವಾಗಿ ಹರಿದು ಹಂಚಿಹೋಗಿದ್ದ ಕನ್ನಡ ನಾಡು ಒಂದಾಗಿದೆ ಎಂದು ತಿಳಿಸಿದರು.

    ಅನೇಕರ ಹೋರಾಟ ಫಲದಿಂದಾಗಿ ನಾವಿಂದು ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಹಿಂದಿನ ಗತ ವೈಭವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ, ನವ ಕರ್ನಾಟಕದ ಉದಯದ ಬಳಿಕ ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.

    ಆರೋಗ್ಯ ಕಾರ್ಯಕರ್ತೆಯರು ಕರೊನಾ ವಿರುದ್ಧ ಜಾಗೃತಿ ಕುರಿತಂತೆ ಕಿರು ನಾಟಕ ಪ್ರದರ್ಶಿಸಿದರು. ಶಾಸಕ ಜಿ.ಎಚ್.ತಿಪ್ಪಾ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.

    ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
    ವಿವಿಧ ಕ್ಷೇತ್ರಗಳ ಸಾಧಕರಾದ ಎಚ್.ಟಿ.ಸಿದ್ದನಾಯಕ, ದೊಡ್ಡಕರಿಯಮ್ಮ, ಕೆ.ಎಂ.ಮುತ್ತುಸ್ವಾಮಿ (ಕಣ್ಣನ್), ಬಾಬುಚರಣ್, ಇಬ್ರಾಹಿಂ ಖಲೀಲ್, ಜಿ.ಗಿರೀಶ, ಎಚ್.ಎನ್.ಮಂಜುನಾಥ್, ಸೈಯದಾ ಸುಮೈಯಾ, ಎಂ.ಶಿವಕುಮಾರ, ಸಣ್ಣಪಾಪಯ್ಯ, ಪಾರ್ವತಮ್ಮ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಬೆಳೆ ಸಮೀಕ್ಷೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಖಾಸಗಿ ಸಮೀಕ್ಷೆಗಾರರಾದ ಡಿ.ರಾಜು, ಕೆ.ಎಂ.ನವೀನ್‌ಕುಮಾರ್, ಟಿ.ದಿನೇಶ, ಕಿರಣ್‌ಕುಮರ್, ಎಸ್.ರಮೇಶ, ವೈ.ಬಿ.ತಿಪ್ಪೇಸ್ವಾಮಿ ಅವರನ್ನು ಕೃಷಿ ಇಲಾಖೆಯಿಂದ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts