More

    ಹೃತಿಕ್ ರೋಷನ್​ ಕಾಲೆಳೆದ ಕಂಗನಾ ರಣಾವತ್!

    ಬೆಂಗಳೂರು: ಹೃತಿಕ್ ರೋಷನ್ ಮತ್ತು ಕಂಗನಾ ರಣಾವತ್ ನಡುವಿನ ಸಮರಕ್ಕೆ ಮತ್ತೊಮ್ಮೆ ಜೀವ ಬಂದಿದೆ. ತಮ್ಮ ಹೆಸರಿನಲ್ಲಿ ನಕಲಿ ಇ-ಮೇಲ್ ಐಡಿ ಸೃಷ್ಟಿಸಿ ಯಾರೋ ನಟಿ ಕಂಗನಾ ರಣಾವತ್ ಜತೆಗೆ ಸಂವಹನ ನಡೆಸುತ್ತಿದ್ದರು ಮತ್ತು ತಮಗೆ ಕಂಗನಾ ಜತೆಗೆ ಯಾವುದೇ ಅಫೇರ್ ಇಲ್ಲ ಎಂದು ಹೃತಿಕ್, ಮುಂಬೈನ ಪೊಲೀಸರಿಗೆ ನಾಲ್ಕು ವರ್ಷಗಳ ಹಿಂದೆ ದೂರು ಸಲ್ಲಿಸಿದ್ದರು. ಈ ಪ್ರಕರಣವು ನಿಧಾನಗತಿಯಲ್ಲಿ ಸಾಗುತ್ತಿದ್ದು ಯಾವುದೇ ತೀರ್ಮಾನವಾಗಿರಲಿಲ್ಲ.

    ಈ ನಿಟ್ಟಿನಲ್ಲಿ ಇತ್ತೀಚೆಗೆ, ಇದನ್ನು ಸೈಬರ್ ಕ್ರೖೆಮ್​ನಿಂದ ಕ್ರೖೆಮ್ ಇಂಟಲಿಜೆನ್ಸ್ ಯೂನಿಟ್​ಗೆ (ಸಿಐಯು) ವರ್ಗಾವಣೆ ಮಾಡಬೇಕು ಎಂದು ಹೃತಿಕ್ ಮನವಿ ಸಲ್ಲಿಸಿದ್ದರು. ಆ ಪ್ರಕರಣವೀಗ ಸಿಐಯುಗೆ ವರ್ಗಾವಣೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣದ ತನಿಖೆಯನ್ನು ಸಿಐಯು ಮುಂದುವರಿಸಲಿದೆ. ‘ಕ್ರಿಶ್ 3’ ಚಿತ್ರೀಕರಣದಲ್ಲಿ ಜತೆಯಾಗಿ ನಟಿಸಿದ್ದ ಹೃತಿಕ್ ಮತ್ತು ಕಂಗನಾ ನಡುವೆ ಅಫೇರ್ ಶುರುವಾಗಿದೆ ಎಂಬ ಸುದ್ದಿ ಕೆಲವು ವರ್ಷಗಳ ಹಿಂದೆ ಕೇಳಿಬಂದಿತ್ತು. ಆದರೆ, ಕಾರಣಾಂತರಗಳಿಂದ ಅವರಿಬ್ಬರ ಮಧ್ಯೆ ಜಗಳವಾಗಿ, ಆ ಜಗಳ ತಾರಕಕ್ಕೇರಿತ್ತು. ಪ್ರಕರಣಕ್ಕೆ ಮರುಜೀವ ಸಿಕ್ಕಿದ್ದರ ಸುದ್ದಿ ಬರುತ್ತಿದ್ದಂತೆಯೇ, ಹೃತಿಕ್ ರೋಷನ್ ಅವರ ಕಾಲೆಳೆದಿದ್ದಾರೆ ಕಂಗನಾ.

    ಹೃತಿಕ್ ಹೆಸರೆತ್ತದೆಯೇ, ‘ಅವರ ಗೋಳಿನ ಕಥೆ ಮತ್ತೊಮ್ಮೆ ಶುರುವಾಯಿತು. ನಮ್ಮಿಬ್ಬರ ಬ್ರೇಕ್-​ಅಪ್ ಆಗಿ ಹಲವು ವರ್ಷಗಳಾದರೂ ಜೀವನದಲ್ಲಿ ಮುಂದಕ್ಕೆ ಹೋಗುವುದಕ್ಕೆ ಅವರು ಮನಸ್ಸು ಮಾಡುತ್ತಿಲ್ಲ. ಅವರು ಸಹ ಬೇರೆಯವರೊಂದಿಗೆ ಡೇಟಿಂಗ್ ಮಾಡುತ್ತಿಲ್ಲ, ನಾನು ಸಹ ಜೀವನದಲ್ಲಿ ಸ್ವಲ್ಪ ಮುಂದುವರಿಯೋಣ ಎಂದರೆ ಮತ್ತೊಮ್ಮೆ ನಾಟಕ ಶುರು ಮಾಡಿದ್ದಾರೆ. ಒಂದು ಚಿಕ್ಕ ಅಫೇರ್​ಗೆ, ಇನ್ನೂ ಅದೆಷ್ಟು ಅಳುತ್ತಾರೋ ಗೊತ್ತಿಲ್ಲ’ ಎಂದು ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts