More

    ಕನಸು ಕಾಣೋದು ಬೇಡ: ಡಿ.ಕೆ. ಸುರೇಶ್ ಹೇಳಿಕೆಗೆ ಡಿಸಿಎಂ ತಿರುಗೇಟು

    ರಾಮನಗರ: ನಮ್ಮ ಶಾಸಕರು ನಿವೃತ್ತರಾದರೂ ಬಿಜೆಪಿ ಹೊರತು ಮತ್ತೊಂದು ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಇದನ್ನು ಅರಿತು ಸಂಸದ ಡಿ.ಕೆ.ಸುರೇಶ್ ಅವರು ಕನಸು ಕಾಣುವುದನ್ನು ಬಿಟ್ಟು, ವಾಸ್ತವದಲ್ಲಿ ಇರಬೇಕು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿರುಗೇಟು ನೀಡಿದರು.

    ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಹೊರಗಿನವರು ಬೀಳಿಸುವುದು ಬೇಡ, ಅವರ ಪಕ್ಷದವರೇ ಬೀಳಿಸುತ್ತಾರೆ ಎನ್ನುವ ಸಂಸದ ಸುರೇಶ್ ಹೇಳಿಕೆ ಕುರಿತಂತೆ ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಡಿ ಕೆ.ಸುರೇಶ್ ಹಗಲು ಕನಸು ಕಾಣುತ್ತಿದ್ದಾರೆ. ಆದರೆ ನಮ್ಮ ಪಕ್ಷದಲ್ಲಿ ಅಂತಹ ಪರಿಸ್ಥಿತಿ ಇಲ್ಲ, ಮುಂದೆಯೂ ಬರುವುದಿಲ್ಲ, ಪಕ್ಷದ ಶಾಸಕರು ನಿವೃತ್ತಿಯಾದರೂ, ಕಾಂಗ್ರೆಸ್‌ಗೆ ಅಧಿಕಾರ ದೊರೆಯುವುದಿಲ್ಲ ಎಂದರು.

    ಕೆಲ ಶಾಸಕರು, ಅವರವರ ಸಮಸ್ಯೆಗಳು ಹಾಗೂ ಬೇಡಿಕೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಳಿ ಹೇಳಿಕೊಂಡಿದ್ಥ್ದಾರೆ. ಇದರಲ್ಲಿ ತಪ್ಪೇನೂ ಇಲ್ಲ. ಅದೇ ರೀತಿ, ಮಾಜಿ ಸಚಿವ ಉಮೇಶ್ ಕತ್ತಿ ನೇತೃತ್ವದಲ್ಲಿ ಎಲ್ಲರೂ ಊಟ ಮಾಡಿದ್ದಾರೆ, ವೈಯಕ್ತಿಕ ವಿಷಯಗಳನ್ನು ಮಾತನಾಡಿದ್ದಾರೆ. ಯಡಿಯೂರಪ್ಪ ನಾಯಕತ್ವದ ಬದಲಾವಣೆಯ ಧ್ವನಿ ಎಲ್ಲಿಯೂ ಇಲ್ಲ. ಈ ಬಗ್ಗೆ ಯಾರು ಎಲ್ಲಿಯೂ ಹೇಳಿಕೆ ನೀಡಿಲ್ಲ ಎಂದು ಸಮರ್ಥಿಸಿಕೊಂಡರು.

    ಸಿಎಂ ಆಪ್ತ ಕಾರ್ಯದರ್ಶಿಯನ್ನಾಗಿ ಸಂತೋಷ್ ಅವರನ್ನು ನೇಮಕ ಮಾಡಿಕೊಳ್ಳುತ್ತಿರುವ ಬಗ್ಗೆ ವಿವಾದ ಭುಗಿಲೆದ್ದಿದೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಅವರೂ ಪಕ್ಷಕ್ಕಾಗಿ ದುಡಿದಿದ್ದಾರೆ. ಸರ್ಕಾರ ರಚನೆಯಲ್ಲೂ ಅವರ ಪಾಲಿದೆ. ಹೀಗಾಗಿ ಸಂತೋಷ್ ಅವರನ್ನು ನೇಮಿಸಿಕೊಂಡಿದ್ದಾರೆ. ನಮ್ಮಲ್ಲಿರುವ ಎಲ್ಲರಿಗೂ ಯೋಗ್ಯತೆ ಇದ್ದು, ಮುಂದಿನ ದಿನಗಳಲ್ಲಿ ಸ್ಥಾನಮಾನ ನೀಡುವ ವಿಶ್ವಾಸ ಇದೆ. ಸ್ವಲ್ಪ ಕಾಯಬೇಕಿದೆ ಎಂದರು.

    ಕಿಟ್ ವಿತರಣೆ: ಜಿಲ್ಲಾಸ್ಪತ್ರೆ ಆವರಣರಲ್ಲಿ ಆಯೋಜಿಸಿದ್ದ ಕಾರ‌್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಪ್ರಾಯೋಜಿಸಿದ್ದ 1.5ಸಾವಿರ ರೂ.ಮೌಲ್ಯದ ದಿನಸಿ ಖರೀದಿಯ ವೋಚರ್‌ಗಳನ್ನು ಡಿಸಿಎಂ ಅಶ್ವತ್ಥ್ ನಾರಾಯಣ್ ಶುಶ್ರೂಷಕಿಯರಿಗೆ ವಿತರಣೆ ಮಾಡಿದರು.

    ಸಿಪಿವೈಗೂ ಅಧಿಕಾರ…!: ಚನ್ನಪಟ್ಟಣ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರು ಈಗಲೂ ನಮ್ಮೊಟ್ಟಿಗೆ ಇದ್ದಾರೆ. ನಮ್ಮ ಆತ್ಮೀಯ ಸ್ನೇಹಿತರೂ ಆಗಿರುವ ಯೋಗೇಶ್ವರ್ ಅವರಿಗೂ ಒಳ್ಳೆಯದು ಆಗುತ್ತದೆ. ಅವರಿಗೂ ಅಧಿಕಾರ ಸಿಗುತ್ತೆ. ಹೀಗಾಗಿ ಸಿಪಿವೈ ಪರ ನಾನು ಬ್ಯಾಟಿಂಗ್ ಮಾಡುತ್ತೇನೆ. ಪಕ್ಷ ಅಧಿಕಾರಕ್ಕೆ ಬರುವಲ್ಲಿ ಅವರ ಶ್ರಮವೂ ಸಾಕಷ್ಟಿದೆ, ಅವರು ನಮ್ಮ ಜಿಲ್ಲೆಯ ಬಿಜೆಪಿ ನಾಯಕರು ಎಂದು ಬಣ್ಣಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts