More

    ಶೌಚಗೃಹಕ್ಕೆ ತೆರಳುತ್ತಿದ್ದ ಮಹಿಳೆಯರ ವಿಡಿಯೋ ಮಾಡುತ್ತಿದ್ದವನಿಗೆ ಸಾರ್ವಜನಿಕರಿಂದ ಥಳಿತ

    ಕನಕಗಿರಿ: ಪಟ್ಟಣದ 3ನೇ ವಾರ್ಡ್ ಇಂದಿರಾ ನಗರದಲ್ಲಿ ಸಾರ್ವಜನಿಕ ಶೌಚಗೃಹಕ್ಕೆ ತೆರಳಿದ್ದ ಮಹಿಳೆಯರನ್ನು ಗಿಡದ ಮರೆಯಲ್ಲಿ ನಿಂತು ಇಣುಕಿ ನೋಡುವುದು ಹಾಗೂ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಶುಕ್ರವಾರ ಹಿಡಿದು ಥಳಿಸಿದ್ದಾರೆ. ಸ್ಮಶಾನದ ರಸ್ತೆಯಲ್ಲಿರುವ ಶೌಚಗೃಹದ ಸುತ್ತ ಜಾಲಿಗಿಡಗಳು ಬೆಳೆದಿದ್ದು, ಮರೆಯಲ್ಲಿ ನಿಂತು ಇಣುಕಿ ನೋಡುವುದು, ವಿಡಿಯೋ ಮಾಡುತ್ತಿರುವುದನ್ನು ಶೌಚಕ್ಕೆ ತೆರಳುತ್ತಿದ್ದ ಮಹಿಳೆ ಗಮನಿಸಿ ಅಕ್ಕಪಕ್ಕದವರಿಗೆ ತಿಳಿಸಿದ್ದಾರೆ.

    ಸಾರ್ವಜನಿಕರೆಲ್ಲರೂ ಹಿಡಿಯಲು ಹೋದಾಗ ಓಡಿ ಹೋಗಲು ಯತ್ನಿಸಿದ್ದಾನೆ. ಮಾಡಿದ ವಿಡಿಯೋಗಳನ್ನು ಡಿಲಿಟ್ ಮಾಡುತ್ತ ಓಡುತ್ತಿದ್ದವನನ್ನು ಹಿಡಿದು ಥಳಿಸಿದ್ದೇವೆಂದು ಸಾರ್ವಜನಿಕರು ತಿಳಿಸಿದರು. ವ್ಯಕ್ತಿ ಹೆಸರು ಹಾಗೂ ಊರಿನ ಕುರಿತು ತಪ್ಪಾಗಿ ಹೇಳುತ್ತಿದ್ದು, ಮೂಲತಃ ಕಾರಟಗಿಯವನು ಎನ್ನಲಾಗಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಆತನನ್ನು ವಶಕ್ಕೆ ಪಡೆದಿದ್ದಾರೆ. ತರಚಿದ ಗಾಯಗಳಾಗಿದ್ದರಿಂದ ಆಸ್ಪತ್ರೆಗೆ ಸೇರಿಸಿದ್ದು, ಆರಕ್ಷಕರು ವಿಚಾರಣೆ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts