More

    ಶೌಚಗೃಹ ಹೊಂದಿರದ ಮನೆಗಳ ಗುರುತಿಸಿ; ಕನಕಗಿರಿ ತಾಪಂ ಇಒ ಚಂದ್ರಶೇಖರ ಕಂದಕೂರು ಸೂಚನೆ

    ಕನಕಗಿರಿ: ಬಯಲು ಬಹಿರ್ದೆಸೆ ಮುಕ್ತ ಗ್ರಾಮಕ್ಕೆ ತ್ಯಾಜ್ಯ ನಿರ್ವಹಣೆ ಮತ್ತು ಗೋಬರ್ ಧನ್ ಮುಂತಾದ ಚಟುವಟಿಕೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಎಂದು ತಾಪಂ ಇಒ ಚಂದ್ರಶೇಖರ ಕಂದಕೂರು ಹೇಳಿದರು.

    ಸುಳೇಕಲ್ ಗ್ರಾಪಂಯಲ್ಲಿ ಶುಕ್ರವಾರ ತಾಲೂಕು ವ್ಯಾಪ್ತಿಯ ಗ್ರಾಪಂ ಅಧ್ಯಕ್ಷರು, ಪಿಡಿಒ, ಕಾರ್ಯದರ್ಶಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಹಮ್ಮಿಕೊಂಡಿದ್ದ ಗ್ರಾಮ ಸ್ವಚ್ಛತಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸ್ವಚ್ಛ ಭಾರತ ಮಿಷನ್ ಯೋಜನೆ ದೇಶದ ಅಭಿವೃದ್ಧಿಯ ಪ್ರತೀಕವಾಗಿದೆ. ಗ್ರಾಪಂ ಅಧ್ಯಕ್ಷರು, ಪಿಡಿಒಗಳು, ಸ್ವಚ್ಛಗ್ರಾಹಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುತ್ತಿದೆ.

    ಗ್ರಾಮೀಣ ಪ್ರದೇಶದಲ್ಲಿ ಜನರು ಬಯಲು ಬಹಿರ್ದೆಸೆಗೆ ಹೋಗದಂತೆ ತಡೆಯಲು ಮನೆ ಮನೆ ಸರ್ವೇ ಮಾಡಬೇಕು. ಈವರೆಗೆ ಶೌಚಗೃಹ ನಿರ್ಮಿಸಿಕೊಳ್ಳದ ಮನೆಗಳನ್ನು ಗುರುತಿಸಿ ವರದಿ ಸಲ್ಲಿಸಬೇಕು ಎಂದು ತಿಳಿಸಿದರು. ರಾಮಣ್ಣ, ಶರಣಬಸವ ತರಬೇತಿ ನೀಡಿದರು. ಗ್ರಾಪಂ ಅಧ್ಯಕ್ಷರಾದ ಗುಂಡಮ್ಮ ಲಿಂಗಪ್ಪ, ಲಕ್ಷ್ಮೀ, ಮಾಳಮ್ಮ, ವಿರೂಪಾಕ್ಷಪ್ಪ, ಪಿಡಿಒಗಳಾದ ಶಂಷೀರ್ ಅಲಿ, ಲಕ್ಷ್ಮಣ್, ನಾಗೇಶ್, ಅಮರೇಶ್, ಲಕ್ಷ್ಮೀಬಾಯಿ, ವೆಂಕೋಬ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಾದ ವೀರಮ್ಮ, ಹನುಮವ್ವ, ಭಾರತಿ, ಹೊನ್ನಮ್ಮ, ಶಾಂತಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts