More

    ಪೌಷ್ಟಿಕಾಂಶಗಳ ಮಾಹಿತಿ ತಿಳಿದುಕೊಳ್ಳಿ, ತಾಪಂ ಇಒ ಚಂದ್ರಶೇಖರ ಕಂದಕೂರು ಸಲಹೆ

    ಕನಕಗಿರಿ: ಗಂಡು-ಹೆಣ್ಣು ಎಂಬ ತಾರತ್ಯಮ ಮಾಡದೆ ಎಲ್ಲರನ್ನು ಒಂದೇ ರೀತಿ ಕಾಣಬೇಕು ಎಂದು ಕನಕಗಿರಿ ತಾಪಂ ಇಒ ಚಂದ್ರಶೇಖರ ಕಂದಕೂರು ಹೇಳಿದರು.

    ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆಎಚ್‌ಪಿಟಿಯಿಂದ ಸಮುದಾಯ ಸಂಘಟಕಿಯರಿಗೆ ಹಮ್ಮಿಕೊಂಡಿದ್ದ ಜೀವನ ಕೌಶಲ ತರಬೇತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

    ಕೌಶಲ ತರಬೇತಿಯಲ್ಲಿ ಹದಿಹರೆಯದ ಕಿಶೋರಿಯರ ಆರೋಗ್ಯ, ತಾಯಿ, ನವಜಾತ ಶಿಶುಗಳು ಮತ್ತು ಮಕ್ಕಳ ಸಮಗ್ರ ಆರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡಲಾಗುತ್ತಿದೆ. ಮಾನಸಿಕವಾಗಿ ಸದೃಢವಾಗಿರುವವರಿಗೆ ಯಾವುದೇ ಸಮಸ್ಯೆ ಬರುವುದಿಲ್ಲ. ಮಹಿಳೆಯರಿಗೆ ಪೌಷ್ಟಿಕಾಂಶಗಳ ಬಗ್ಗೆ ಅರಿವಿರಬೇಕು ಎಂದರು.

    ಕೆಎಚ್‌ಪಿಟಿ ಕಾರ್ಯಕ್ರಮ ಯೋಜನಾಧಿಕಾರಿ ಉಮಾರೆಡ್ಡಿ ಮಾದಿನಾಳ, ಪುಂಡಲೀಕ, ತಾಲೂಕು ಐಇಸಿ ಸಂಯೋಜಕ ಕೆ. ಶಿವಕುಮಾರ್, ಬ್ಲಾಕ್ ಕೋಆರ್ಡಿನೇಟರ್ ಪ್ರಸಾದ್, ಸಂಯೋಜಕರಾದ ಮಲ್ಲೇಶಪ್ಪ ಜಾಧವ್, ಸಿದ್ದನಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts