More

    ಸರ್ವೇ ಮುಗಿದ ಬಳಿಕ ಹಳೇ ಆಸ್ಪತ್ರೆ ಕಟ್ಟಡ ತೆರವು: ಡಿಎಚ್‌ಒ ಅಲಕನಂದಾ ಮಳಗಿ ಮಾಹಿತಿ

    ಕನಕಗಿರಿ: ಕೆಲ ದಿನಗಳಿಂದ ಬಹು ಚರ್ಚೆಯಾಗುತ್ತಿರುವ 100 ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಪಟ್ಟಣದ ಹಳೇ ಆಸ್ಪತ್ರೆ ವ್ಯಾಪ್ತಿಯ ಸ್ಥಳವನ್ನು ಡಿಎಚ್‌ಒ ಅಲಕನಂದಾ ಮಳಗಿ ಬುಧವಾರ ಪರಿಶೀಲಿಸಿದರು. ಬಳಿಕ ಮುಖಂಡರು, ಅಧಿಕಾರಿಗಳ ಜತೆ ಸಭೆ ನಡೆಸಿದರು.

    ಪ್ರಸಕ್ತ ವರ್ಷ ಆಯವ್ಯಯದಲ್ಲಿ ರಾಜ್ಯದ ಏಳು ತಾಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ರಾಜ್ಯ ಸರ್ಕಾರ ಘೋಷಿಸಿದೆ. ಈ ಪೈಕಿ ಕನಕಗಿರಿಯೂ ಒಂದಾಗಿದೆ. ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಕನಿಷ್ಠ 4 ಎಕರೆ ಜಾಗ ಅಗತ್ಯವಿದೆ. ಕನಕಗಿರಿಯ ಸರ್ವೇ ನಂ. 212ರಲ್ಲಿ ಬರುವ ಸರ್ಕಾರದ ಅಧೀನದಲ್ಲಿರುವ 4 ಎಕರೆ 15 ಗುಂಟೆ ಭೂಮಿ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತವಾಗಿದೆ. ಶಿಥಿಲಗೊಂಡಿರುವ ಹಳೇ ಆಸ್ಪತ್ರೆಯ ಕಟ್ಟಡ ತೆರವಿಗೂ ಮುನ್ನ ಕಂದಾಯ ಅಧಿಕಾರಿಗಳು ಭೂಮಿಗೆ ಸಂಬಂಧಿಸಿದ ದಾಖಲೆ, ಸರ್ವೇ ಪೂರ್ಣಗೊಳಿಸಿ ಹದ್ದುಬಸ್ತು ಮಾಡಿದ ನಂತರ ಕಟ್ಟಡಗಳ ತೆರವು ಮಾಡಲಾಗುತ್ತದೆ ಎಂದು ಡಿಎಚ್‌ಒ ಅಲಕನಂದಾ ತಿಳಿಸಿದರು.

    ತಹಸೀಲ್ದಾರ್ ಧನಂಜಯ ಮಾಲಗಿತ್ತಿ ಮಾತನಾಡಿ, ಸರ್ವೇ ನಂ. 188 ರಲ್ಲಿನ ಭೂಮಿ ವ್ಯಾಜ್ಯವು ಹೈಕೋೀಟ್‌ನಲ್ಲಿದ್ದು, ಅದಕ್ಕಾಗಿ 212 ಸರ್ವೇ ನಂ.ಭೂಮಿ ಮಾತ್ರ ಇದೆ. ಇದು ಆಶ್ರಯ ಯೋಜನೆಗಾಗಿ ತಾಪಂ ಇಒ ಹೆಸರಿನಲ್ಲಿದ್ದು, ವರ್ಗಾವಣೆ ಮಾಡಿಕೊಳ್ಳಬೇಕಿದೆ ಎಂದರು. ಶಾಸಕರ ಆಪ್ತ ಕಾರ್ಯದರ್ಶಿ ಸುರೇಶ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಟಿ.ಜೆ.ರಾಜಶೇಖರ, ಜ್ಯೋತಿ, ನರಸಪ್ಪ ಕುರುಗೋಡ, ಮುಖಂಡರಾದ ಮಹಾಂತೇಶ ಸಜ್ಜನ್, ವಾಗೀಶ ಹಿರೇಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts