More

    ಸದೃಢ ದೇಹ ಹೊಂದಲು ಕ್ರೀಡೆಗಳು ಸಹಕಾರಿ

    ಕನಕಗಿರಿ: ಆಟೋಟಗಳು ಸದೃಢ ದೇಹ ಹೊಂದಲು ಸಹಕಾರಿಯಾಗಿವೆ ಎಂದು ನವಲಿಯ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವಿರುಪಣ್ಣ ಕಲ್ಲೂರು ಹೇಳಿದರು.

    ತಾಲೂಕಿನ ನವಲಿ ತಾಂಡಾದಲ್ಲಿ ದಸರಾ ನಿಮಿತ್ತ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಸದೃಢ ದೇಹ ಹಾಗೂ ಸೃದೃಢ ಮನಸ್ಸು ಮನುಷ್ಯನ ಅವಿಭಾಜ್ಯ ಅಂಗವಾಗಿವೆ. ಇವರೆಡನ್ನೂ ಹೊಂದಲು ಕ್ರೀಡೆಗಳು ಸಹಕಾರಿಯಾಗಿವೆ.

    ಈ ಹಿಂದೆ ಹಬ್ಬ ಹರಿದಿನಗಳಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು ಆಟಗಳನ್ನಾಡುವುದು, ಮನರಂಜನೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದರು. ಇದೀಗ ಶಾಲೆಗಳಲ್ಲಿಯೇ ಆಟಗಳಿಗಾಗಿ ಸಮಯ ಮೀಸಲಿರಿಸಲಾಗಿದೆ ಎಂದರು. ಮಕ್ಕಳು ಶಿಕ್ಷಣದ ಜತೆಗೆ ಆಟೋಟಗಳಲ್ಲಿ ಪಾಲ್ಗೊಳ್ಳಬೇಕು. ಯುವ ಜನತೆ ಗ್ರಾಮೀಣ ಕ್ರೀಡೆ ಕಬಡ್ಡಿ ಆಟವನ್ನು ಉಳಿಸಿ ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.

    ಕಾರಟಗಿಯ ಭಗತಸಿಂಗ್ ಯುವಕ ಸಂಘ (ಪ್ರಥಮ), ಸೇವಾಲಾಲ್ ಯುವಕ ಸಂಘ ನವಲಿ ತಾಂಡಾ (ದ್ವಿತೀಯ) ಸ್ಥಾನ ಪ್ರಡೆದುಕೊಂಡವು. ಗ್ರಾಪಂ ಉಪಾಧ್ಯಕ್ಷ ನಾಗರಾಜ ತಳವಾರ, ಪ್ರಾಕೃಪಸ ಸಂಘದ ಅಧ್ಯಕ್ಷ ಭೀಮನಗೌಡ ಹರ್ಲಾಪುರ, ಪ್ರಮುಖರಾದ ಜಡಿಯಪ್ಪ ಭೋವಿ, ಶಂಕರ್ ಭಜಂತ್ರಿ, ದೊಡ್ಡಣ್ಣ, ಈಶಪ್ಪ ಗಾಜಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts