More

    ತುಂಬಿ ಹರಿದ ಲಕ್ಷ್ಮೀದೇವಿ ಕೆರೆ, ಹಳ್ಳದ ನೀರಿಗೆ ಭತ್ತ ಬೆಳೆಯುವ ಆಲೋಚನೆ ಮೂಡಿಸಿದ ವರುಣ

    ಕನಕಗಿರಿ: ಶನಿವಾರ ಹಾಗೂ ಭಾನುವಾರ ಸುರಿದ ಮಳೆಗೆ ಪಟ್ಟಣ ಹೊರವಲಯದ ಐತಿಹಾಸಿಕ ಲಕ್ಷ್ಮೀದೇವಿ ಕೆರೆಯು ಸೋಮವಾರ ಬೆಳಗಿನ ಜಾವ ತುಂಬಿದ್ದು, ಕೆರೆ ಕೋಡಿ ಬಿದ್ದಿದೆ.

    ಕೆರೆ ಹಿಂದಿನ ಪ್ರದೇಶದ ಗ್ರಾಮಗಳಾದ ಹಾಸಗಲ್, ಮುಸಲಾಪುರ, ರಾಂಪುರ, ಪರಾಪುರ, ನಾಗಲಾಪುರ ಹಾಗೂ ಇತರ ಗ್ರಾಮಗಳ ವ್ಯಾಪ್ತಿಯಲ್ಲಿ ಎರಡ್ಮೂರು ದಿನಗಳಿಂದ ಮಳೆ ಸುರಿದಿದ್ದು, ರಾಂಪುರ, ನಾಗಲಾಪುರ ಕೆರೆಗಳು ತುಂಬಿ ಹೆಚ್ಚಿನ ನೀರು ಪಟ್ಟಣ ವ್ಯಾಪ್ತಿಯ ಲಕ್ಷ್ಮೀದೇವಿ ಕೆರೆಗೆ ಬಂದು ಸೇರಿದೆ. ಈಗಾಗಲೇ ಕೆರೆ ತುಂಬುವ ಯೋಜನೆಯಡಿ ಅಲ್ಪ ಭಾಗ ತುಂಬಿಕೊಂಡಿದ್ದ ಕೆರೆಯು ಈ ಮಳೆ ನೀರಿನ ಹರಿವಿನಿಂದ ಭರ್ತಿಯಾಗಿ ಕೆರೆ ಕೋಡಿ ಬಿದ್ದಿದೆ. ಈ ನೀರು ಹಳ್ಳದ ಮೂಲಕ ಹರಿಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಕೆರೆಗೆ ಸಂಗ್ರಹವಾದ ನೀರಿನಿಂದ ಬೋರ್‌ವೆಲ್‌ಗಳಿಗೆ ಅಂತರ್ಜಲ ಮಟ್ಟ ಹೆಚ್ಚುವ ಭರವಸೆ ರೈತರಾಗಿದ್ದಾಗಿದೆ. ಅಲ್ಲದೇ, ಇನ್ನೆರಡು ವರ್ಷ ನೀರಿನ ಚಿಂತೆ ಕೊರತೆ ಕಾಣದು ಎಂಬುದು ಈ ಭಾಗದ ಅನ್ನದಾತರ ನಿರೀಕ್ಷೆಯಾಗಿದೆ.

    ದೌಡು: ಕೆರೆ ಕೋಡಿ ಬಿದ್ದು, ರಭಸವಾಗಿ ಹರಿಯುವ ನೀರನ್ನು ನೋಡಲು ಸ್ಥಳೀಯರು ಮಾತ್ರವಲ್ಲದೇ ಸುತ್ತಲಿನ ಗ್ರಾಮಗಳ ಜನತೆ ತಂಡೋಪ ತಂಡವಾಗಿ ಕೆರೆಯತ್ತ ಸೇರಿ ಸಂಭ್ರಮಿಸುವುದು ಕಂಡು ಬಂತು.

    ಹೊಸ ಆಲೋಚನೆ: ಹಳ್ಳದ ಮೂಲಕ ಹರಿಯುತ್ತಿರುವ ಲಕ್ಷೀದೇವಿಯ ಕೆರೆಯ ಹರಿಯುವ ನೀರಿನಿಂದ ಭತ್ತ ಹಾಗೂ ಇತರ ಬೆಳೆಗಳನ್ನು ಬೆಳೆಯುವ ಯೋಚನೆ ಹಲವು ರೈತರಲ್ಲಿ ಮೂಡಿದ್ದು, ಹೊಸ ಪ್ರಯತ್ನಕ್ಕೆ ಅಣಿಯಾಗುವ ಸಿದ್ಧತೆ ಕಾಣುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts