More

    ಒತ್ತುವರಿ ಸರ್ಕಾರಿ ಭೂಮಿ ತೆರವುಗೊಳಿಸಲು ಪ್ರಭಾರ ತಹಸೀಲ್ದಾರ್‌ಗೆ ಹನುಮನಾಳ ಗ್ರಾಮಸ್ಥರ ಮನವಿ

    ಕನಕಗಿರಿ: ತಾಲೂಕಿನ ಹನುಮನಾಳ ಗ್ರಾಮದಲ್ಲಿ ಒತ್ತುವರಿಯಾಗಿರುವ ಸರ್ಕಾರದ 54 ಎಕರೆ ಭೂಮಿಯನ್ನು ತೆರವುಗೊಳಿಸಬೇಕು. ಸದರಿ ಜಮೀನನ್ನು ನಾನಾ ಸಮುದಾಯಗಳ ಸ್ಮಶಾನಕ್ಕೆ ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ಪ್ರಭಾರ ತಹಸೀಲ್ದಾರ್ ಮಹಾಂತಗೌಡಗೆ ಗ್ರಾಮಸ್ಥರು ಸೋಮವಾರ ಮನವಿ ಸಲ್ಲಿಸಿದರು.

    ಗ್ರಾಮಸ್ಥ ಅಚ್ಚಪ್ಪ ಕುರುಬರ ಮಾತನಾಡಿ, ಗ್ರಾಮದ ಸರ್ವೇ ನಂ. 106ರಲ್ಲಿ 54 ಎಕರೆ ಸರ್ಕಾರಿ ಜಮೀನು ಇದ್ದು, ಈ ಜಮೀನನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. ಸದರಿ ಜಮೀನಿನ ಅತಿಕ್ರಮಣ ತೆರವು ಮಾಡಿ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವಿಲ್ಲದ ನಾನಾ ಸಮುದಾಯಗಳಿಗೆ ಹಾಗೂ ಆಟದ ಮೈದಾನಕ್ಕೆ ಮಂಜೂರು ಮಾಡಬೇಕು. ಉಳಿದ ಭೂಮಿಯನ್ನು ಗೋಮಾಳವನ್ನಾಗಿ ಪರಿವರ್ತಿಸಿ ಗ್ರಾಮದ ಜಾನುವಾರುಗಳನ್ನು ಮೇಯಿಸಲು ಅನುಕೂಲ ಮಾಡಿಕೊಡಲು ಅಧಿಕಾರಿಗಳು ಮುಂದಾಗಬೇಕು ಎಂದು ಆಗ್ರಹಿಸಿದರು.

    ಅಮರಪ್ಪ ಹಣವಾಳ, ಯಮನೂರಪ್ಪ ವಾಲೇಕಾರ, ಮಲ್ಲಪ್ಪ ಕೆರಕೋಡಿ, ಯಮನೂರಪ್ಪ ಮ್ಯಾದ್ನೇರಿ, ಹನುಮಂತಪ್ಪ ಕೆರಕೋಡಿ, ರಾಮನಗೌಡ ಪೊಲೀಸ್ ಪಾಟೀಲ್, ಷಣ್ಮುಖಪ್ಪ ಮ್ಯಾದ್ನೇರಿ, ಮರಿಯಪ್ಪ ಕೆರಕೋಡಿ, ಹನುಮಂತ ಮ್ಯಾದ್ನೇರಿ, ನಿಂಗಪ್ಪ ವಡಕಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts