More

    ನಿರ್ಲೂಟಿ ಗ್ರಾಮದಲ್ಲಿ ಶೌಚಗೃಹ ಜಾಗೃತಿ ಮೂಡಿಸಿದ ಕನಕಗಿರಿ ತಾಪಂ ಇಒ

    ಕನಕಗಿರಿ: ತಾಲೂಕಿನ ನಿರ್ಲೂಟಿ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಊರು ಸಂಚಾರದ ವೇಳೆ ಶೌಚಗೃಹಗಳಲ್ಲಿ ಕುಳ್ಳು-ಕಟ್ಟಿಗೆ ಸೇರಿ ಇತರ ಸಾಮಗ್ರಿ ಕಂಡು ಬೇಸರ ವ್ಯಕ್ತಪಡಿಸಿದ್ದ ತಾಪಂ ಇಒ ಚಂದ್ರಶೇಖರ ಕಂದಕೂರು, ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ, ಶೌಚಗೃಹ ಬಳಸುವಂತೆ ಜಾಗೃತಿ ಮೂಡಿಸಿದರು.

    ಮಹಿಳೆಯರ ಸ್ವಾಭಿಮಾನದ ಸಂಕೇತ ಹಾಗೂ ಸ್ವಚ್ಛ ಗ್ರಾಮಕ್ಕೆ ಕಾರಣವಾಗಬೇಕಿದ್ದ ಶೌಚಗೃಹಗಳನ್ನು ಗ್ರಾಮಸ್ಥರು ನಿರ್ಮಿಸಿಕೊಂಡರೂ ಬಳಸದೆ ಕಟ್ಟಿಗೆ, ಕುಳ್ಳು ಸಂಗ್ರಹಿಸಲಾಗಿದೆ. ಅಲ್ಲದೆ ಗ್ರಾಮಸ್ಥರು ಬಯಲು ಬಹಿರ್ದೆಸೆಗೆ ಹೋಗುತ್ತಿರುವುದು, ಊರಿಗೆ ಬರುವ ಜನರಿಗೆ ದುರ್ವಾಸನೆ ಸ್ವಾಗತ ಕೋರುತ್ತದೆ. ಸರ್ಕಾರದ ಕೋಟ್ಯಂತರ ರೂ. ಯೋಜನೆಯೇ ಬುಡಮೇಲಾಗಿದೆ ಎಂದು ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಇಒ ಅಸಮಾಧಾನ ಹೊರ ಹಾಕಿದ್ದರು. ಭಾನುವಾರ ಗ್ರಾಮಕ್ಕೆ ತೆರಳಿ ಶೌಚಗೃಹ ಬಳಕೆಯ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಿದರು. ಪ್ರತಿಯೊಬ್ಬರೂ ಕಡ್ಡಾಯವಾಗಿ ಶೌಚಗೃಹ ಬಳಸಬೇಕು. ಸ್ವಚ್ಛತೆ ಕಾಪಾಡಬೇಕು ಎಂದು ತಿಳಿಸಿದರು. ಅಲ್ಲದೆ, ಗ್ರಾಮದಲ್ಲಿ ಶೌಚಗೃಹ ಬಳಕೆ ಕುರಿತು ಜಾಗೃತಿ ಮೂಡಿಸುವಂತೆ ಸಿಬ್ಬಂದಿಗೆ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts