More

    ಕನಕಾಪುರಕ್ಕೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಿ

    ಕನಕಗಿರಿ: ತಾಲೂಕಿನ ಕನಕಾಪುರ ಗ್ರಾಮಕ್ಕೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಅನ್ನದಾತ ರೈತ ಸಂಘ ಗ್ರಾಮೀಣ ಘಟಕದಿಂದ ಗ್ರೇಡ್ 2 ತಹಸೀಲ್ದಾರ್ ವಿ.ಎಚ್. ಹೊರಪೇಟಿಗೆ ಸೋಮವಾರ ಮನವಿ ಸಲ್ಲಿಸಿದರು.

    ಘಟಕದ ಅಧ್ಯಕ್ಷ ಮರಿಯಪ್ಪ ಹುಗ್ಗಿ ಮಾತನಾಡಿ, ಕನಕಾಪುರ ಗ್ರಾಮಸ್ಥರು ಪಡಿತರ ತರಲು 4 ಕಿ.ಮೀ ಅಂತರದ ಸಿರವಾರಕ್ಕೆ ಹೋಗಬೇಕಿದೆ. ಅಲ್ಲಿಗೆ ನೇರವಾಗಿ ಬಸ್ ಸಂಪರ್ಕವಿಲ್ಲ. ಸ್ವಂತ ವಾಹನಗಳನ್ನು ಬಳಸಿಕೊಂಡು ಪಡಿತರ ತರುವುದು ಖರ್ಚಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಸ್ವಂತ ವಾಹನವಿಲ್ಲದವರಿಗೆ ಅದು ಇನ್ನಷ್ಟು ಕಷ್ಟದಾಯಕ. ಇದರಿಂದ ವೃದ್ಧರು, ಮಹಿಳೆಯರು, ಅಂಗವಿಕಲರು, ಕೂಲಿ ಕೆಲಸಕ್ಕೆ ತೆರಳುವವರಿಗೆ ಬಹಳ ತೊಂದರೆಯಾಗಿದೆ.

    ಈಗಾಗಲೇ ಗ್ರಾಮದವರೊಬ್ಬರು ಮುಖ್ಯಮಂತ್ರಿಗಳ ಜನಸ್ಪಂದನೆಯಲ್ಲಿ ಕನಕಾಪುರಕ್ಕೆ ಹೊಸ ನ್ಯಾಯಬೆಲೆ ಅಂಗಡಿ ನೀಡುವಂತೆ ಮನವಿ ಸಲ್ಲಿಸಿದ್ದು, ಇಲಾಖೆಯು ಈ ಬಗ್ಗೆ ಗಮನಹರಿಸಿ, ಕನಕಾಪುರ ಹಾಗೂ ಹನುಮನಾಳ ಪಡಿತರದಾರರ ಅನುಕೂಲಕ್ಕಾಗಿ ಕನಕಾಪುರಕ್ಕೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡುವಂತೆ ಆಗ್ರಹಿಸಿದರು. ಪ್ರಮುಖರಾದ ಪರಸಪ್ಪ ಹುಗ್ಗಿ, ಲಚಮಪ್ಪ, ಸಿದ್ದಪ್ಪ, ಕನಕಪ್ಪ, ಗ್ಯಾನನಗೌಡ, ಶೇಖರಪ್ಪ, ಹನುಮನಗೌಡ, ಶೇಖರಪ್ಪ, ಯಲ್ಲಾಲಿಂಗ, ಯಮನೂರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts