ಕನಕಗಿರಿ: ಸಾರ್ವಜನಿಕರಿಗೆ ಸೇವೆ ನೀಡಲು ಹಾಗೂ ಅಲೆದಾಟ ತಪ್ಪಿಸಲು ಸರ್ಕಾರ ನೂತನ ತಾಲೂಕುಗಳನ್ನು ಬಿಜೆಪಿ ಸರ್ಕಾರದಲ್ಲಿ ಜಾರಿಗೊಳಿಸಲಾಗಿತ್ತು. ತಾಲೂಕು ಕಚೇರಿ ಪ್ರಾರಂಭಿಸುವ ಮೂಲಕ ಸಾರ್ವಜನಿಕರ ಮನೆಯ ಬಾಗಿಲಿಗೆ ಸೇವೆ ನೀಡಲು ಸರ್ಕಾರ ಬದ್ಧವಿದೆ ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.
ಪಟ್ಟಣದ ಸಪಪೂ ಕಾಲೇಜು(ಪ್ರೌಢ ಶಾಲೆ) ಕಟ್ಟಡದಲ್ಲಿ ಭಾನುವಾರ ನೂತನ ತಾಪಂ ಕಚೇರಿ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಸೌಲಭ್ಯ ಪಡೆಯಲು ಗಂಗಾವತಿಗೆ ಸಾರ್ವಜನಿಕರು ತಿರುಗಾಡುವಂತ ಪರಿಸ್ಥಿತಿ ಇತ್ತು. ಆದರೆ ತಾಪಂ ಕಚೇರಿ ಪ್ರಾರಂಭಿಸಿರುವುದರಿಂದ ತುಂಬಾ ಅನುಕೂಲವಾಗಲಿದೆ. ಶೀಘ್ರವೇ ಉಪ ಖಜಾನೆ ಹಾಗೂ ಉಪ ನೋಂದಣಿ ಕಚೇರಿ ಪ್ರಾರಂಭಿಸಲಾಗುವುದು ಎಂದರು.
ಗಂಗಾವತಿ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಉಪಾಧ್ಯಕ್ಷೆ ಭೀಮಮ್ಮ ಬುನ್ನಟ್ಟಿ, ಸದಸ್ಯರಾದ ಶಿವಮ್ಮ ಚವ್ಹಾಣ, ಬಸವಂತಗೌಡ ಪಾಟೀಲ, ಪ್ರಮುಖರಾದ ಡಾ.ದೊಡ್ಡಯ್ಯ ಅರವಟಗಿಮಠ, ಮಹಾಂತೇಶ ಸಜ್ಜನ್, ವಾಗೇಶ ಹಿರೇಮಠ, ಕನಕಗಿರಿ ತಾಪಂ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಅರುಣ ಕುಮಾರ, ಸಹಾಯಕ ನಿರ್ದೇಶಕ ಈರಣ್ಣ ಸೇರಿ ಇತರರಿದ್ದರು.