More

    ಮಾತೃಭಾಷೆಗೆ ಪ್ರಾಮುಖ್ಯತೆ ನೀಡಲಿ

    ಕನಕಗಿರಿ: ಹಿಂದಿ ದಿವಸ್ ಆಚರಣೆಯ ಮೂಲಕ ಇನ್ನಿತರ ಭಾಷೆಗಳನ್ನು ಗೌಣವಾಗಿ ಕಾಣುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ಬುಧವಾರ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪ್ರತಿಭಟಿಸಿ ತಹಸೀಲ್ದಾರ್ ಧನಂಜಯ ಮಾಲಗಿತ್ತಿಗೆೆ ಮನವಿ ಸಲ್ಲಿಸಿದರು.

    ಮುಖಂಡ ಅಶೋಕ ಉಮಲೂಟಿ ಮಾತನಾಡಿ, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ನೂರಾರು ಭಾಷೆಗಳಿವೆ. ಆದರೆ, ಎಲ್ಲಾ ಭಾಷಿಕರಿಂದ ತೆರಿಗೆ ಪಾವತಿಸಿಕೊಳ್ಳುವ ಕೇಂದ್ರ ಸರ್ಕಾರ, ಜನತೆಯ ಮೇಲೆ ಹಿಂದಿ ಹೇರಿಕೆ ಮಾಡುವುದಲ್ಲದೇ, ಹಿಂದಿ ದಿವಸ್ ಮೂಲಕ ಆ ಭಾಷೆಯನ್ನು ಮಾತ್ರ ಮೆರೆಸುವ ಕೆಲಸ ನಡೆಯುತ್ತಿದೆ. 400 ವರ್ಷಗಳ ಇತಿಹಾಸವಿರುವ ಹಿಂದಿ ಭಾಷೆಗೆ ತೋರುತ್ತಿರುವ ಗೌರವವನ್ನು 2,500 ವರ್ಷಗಳ ಇತಿಹಾಸ ಹೊಂದಿದ ಕನ್ನಡಕ್ಕೆ ಯಾಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

    ಇದು ಕೇಂದ್ರ ಸರ್ಕಾರ ಮಾಡುತ್ತಿರುವ ತಾರತಮ್ಯ ನೀತಿಯಾಗಿದೆ. ಹಿಂದಿ ದಿವಸ್‌ಅನ್ನು ಆಚರಿಸುವುದಾದರೆ, ಹಿಂದಿ ಭಾಷೆ ಮಾತನಾಡುವ ರಾಜ್ಯಗಳಲ್ಲಿ ಆಚರಿಸಲಿ. ಕನ್ನಡಿಗರ ತೆರಿಗೆಯಲ್ಲಿ ಹಿಂದಿ ದಿವಸ್ ಆಚರಿಸುವುದನ್ನು ಪಕ್ಷ ಖಂಡಿಸುತ್ತದೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ನಮ್ಮ ಮಾತೃಭಾಷೆಗೆ ಪ್ರಾಮುಖ್ಯತೆ ನೀಡಬೇಕು ಎಂದರು.

    ನಿರ್ಲೂಟಿ ರಸ್ತೆಯಲ್ಲಿನ ಜೆಡಿಎಸ್ ಕಚೇರಿಯಿಂದ ತಹಸಿಲ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರಮುಖರಾದ ಪಂಪಯ್ಯಸ್ವಾಮಿ, ಶರಣೇಗೌಡ, ಶೇಖರಪ್ಪ ಬಳಿಗಾರ, ಸೊಹೇಲ್ ಎಲಿಗಾರ, ಹೇಮರಾಜ್, ಸತ್ಯನಾರಾಯಣ, ಮಂಜು, ಯಮನೂರ, ಮರಿಸ್ವಾಮಿ, ಬಸವರಾಜ ಚಳ್ಳೂರು, ಈಶಪ್ಪ, ಚಿನ್ನಪ್ಪ, ರಾಜಾಹುಲಿ ಸೂಳೇಕಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts