More

    ಕೇಂದ್ರ ಕಾರ್ಮಿಕ ವಿರೋಧಿ ಸರ್ಕಾರ ಎಂದು ಆಪಾದಿಸಿದ ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್

    ಕನಕಗಿರಿ: ವಿರೋಧದ ನಡುವೆಯೂ ದೇಶದಲ್ಲಿ ಆಳ್ವಿಕೆ ನಡೆಸುತ್ತಿರುವ ನರೇಂದ್ರ ಮೋದಿ ಸರ್ಕಾರ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿರುವುದು ದುರದೃಷ್ಟಕರ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಹೇಳಿದರು.

    ಪಟ್ಟಣದ ಸಿಐಟಿಯು ತಾಲೂಕು ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಿಐಟಿಯು 2ನೇ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಆಡಳಿತ ಸರ್ಕಾರತಗಳಿಗೆ ಆಗಾಗ ಕಾರ್ಮಿಕ ನೀತಿ ವಿರುದ್ಧ ಹೋರಾಟ ನಡೆಸಿ ಬಿಸಿ ಮುಟ್ಟಿಸಿದರೂ ಎಪಿಎಂಸಿ ಕಾಯ್ದೆ ಜಾರಿಗೆ ತಂದು ಶ್ರಮಿಕ ವರ್ಗವನ್ನು ತುಳಿಯುತ್ತಿವೆ. ಸಂವಿಧಾನ ವಿರೋಧಿ ಹಾಗೂ ಧರ್ಮ ರಾಜಕಾರಣದೀಂದ ಕಾರ್ಮಿಕ ವರ್ಗದ ಐಕ್ಯತೆಗೆ ಧಕ್ಕೆ ಬಂದಿದೆ. ಜನರ ನೈಜ ಸಮಸ್ಯೆಗಳನ್ನು ಮರೆಮಾಚಿ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತರುವುದಲ್ಲದೇ, ದೇಶವನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂದು ಆಪಾದಿಸಿದರು.

    ಎಸ್‌ಎಫ್‌ಐ ತಾಲೂಕು ಕಾರ್ಯದರ್ಶಿ ಶಿವಕುಮಾರ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಪಠ್ಯಪುಸ್ತಕ ಪರಿಷ್ಕರಣೆ, ಕಾರ್ಮಿಕ ಕಾನೂನುಗಳ ರದ್ದತಿ, ಸಿಎಎ ಜಾರಿ ಇತ್ಯಾದಿ ವಿಚಾರಗಳು ಪ್ರತ್ಯೇಕವಲ್ಲ ಎಂದರು.

    ಪ್ರಮುಖರಾದ ಲಕ್ಷ್ಮೀದೇವಿ ಸೋನಾರ್, ನಾಗೇಶ್ ನಾಯಕ, ಸಿಐಟಿಯು ಜಿಲ್ಲಾ ಮುಖಂಡರಾದ ರಮೇಶ್ ಬಿ., ಶಿವಕುಮಾರ್ ಈಚನಾಳ, ಅಲ್ಲಾಸಾಬ್ ಇತರರಿದ್ದರು.
    ಮಲ್ಲಪ್ಪ ಮ್ಯಾಗಡೆ ಮರು ಆಯ್ಕೆ: ಸಿಐಟಿಯು ತಾಲೂಕು ಸಮಿತಿ ಪುನರ್ ರಚಿಸಲಾಗಿದ್ದು, ಮಲ್ಲಪ್ಪ ಮ್ಯಾಗಡೆ ಮರು ಆಯ್ಕೆಗೊಂಡಿದ್ದಾರೆ. ನೂರ್ ಜಹಾನ್ ಬೇಗಂ (ಕಾರ್ಯದರ್ಶಿ), ಸಣ್ಣ ನಿಂಗಪ್ಪ (ಖಜಾಂಚಿ), ನಬಿ ಸಾಬ್, ಈರಮ್ಮ (ಉಪಾಧ್ಯಕ್ಷರು) ಪರಶುರಾಮ್, ಭಾರ್ಗವಿ (ಸಹ ಕಾರ್ಯದರ್ಶಿಗಳು) ಸದಸ್ಯರಾಗಿ ಪಾಮಣ್ಣ, ಹುಸೇನ್‌ಸಾಬ್ ತಾವರಗೇರಾ ಮೌಲಾ ಹುಸೇನ್, ಶಶಿಕಲಾ, ಅಣ್ಣಮ್ಮ ಆಯ್ಕೆಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts