More

    ಮತಕ್ಕಾಗಿ ಸನಾತನ ಧರ್ಮ ದೂಷಿಸುವ ರಾಜಕಾರಣಿಗಳು

    ಕನಕಗಿರಿ: ಅನಾದಿ ಕಾಲದಿಂದಲೂ ಹಿಂದುತ್ವ, ಸನಾತನ ಧರ್ಮದ ಅವನತಿಗೆ ಸಂಚು ರೂಪಿಸುತ್ತಾ ಬರಲಾಗುತ್ತಿದೆ. ಅದರಂತೆ ಇದೀಗ ಮತ ಬ್ಯಾಂಕ್‌ಗಾಗಿ, ಪ್ರಚಾರಕ್ಕಾಗಿ ಕೆಲ ರಾಜಕಾರಣಿಗಳು, ಸಾಹಿತಿಗಳು ಸನಾತನ ಹಾಗೂ ಹಿಂದುತ್ವವನ್ನು ದೂಷಿಸುವುದಕ್ಕೆ ಮುಂದಾಗಿದ್ದಾರೆ ಎಂದು ಭಜರಂಗದಳದ ರಥಯಾತ್ರೆಯ ಬಳ್ಳಾರಿ ವಿಭಾಗದ ಸುರಕ್ಷಾ ಪ್ರಮುಖ ಎಚ್.ವಿ ಪವಾರ ಹೇಳಿದರು.

    ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಸಂಘಟನೆಗೆ 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿರುವ ಶೌರ್ಯ ರಥಯಾತ್ರೆಯು ಭಾನುವಾರ ರಾತ್ರಿ ಪಟ್ಟಣಕ್ಕೆ ಆಗಮಿಸಿದ್ದು, ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

    ಅಭಿವೃದ್ಧಿಯ ಮೇಲೆ ಅಧಿಕಾರ ಹಿಡಿಯುವ ಬದಲು ಹಿಂದುತ್ವ ಹಾಗೂ ಸನಾತನ ಧರ್ಮವನ್ನು ಅವಹೇಳನ ಮಾಡುತ್ತಾ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಈ ರೀತಿಯ ಅವಹೇಳನದ ಹೇಳಿಕೆಗಳನ್ನು ನಮ್ಮ ಸಮಾಜ ಗಮನಿಸಬೇಕಿದೆ. ಜನರ ಸೇವೆ ಮಾಡಲು ಅಧಿಕಾರ ನೀಡಿದರೆ ಅದನ್ನು ದುರ್ಬಳಕೆ ಮಾಡಿಕೊಂಡು ಹಿಂದುಗಳ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿರುವುದು ಶೋಚನೀಯ ಎಂದರು.

    ಬಳ್ಳಾರಿ ವಿಭಾಗ ಸಂಯೋಜಕ ಮಲ್ಲಿಕಾರ್ಜುನ ಸಿಂಧನೂರು, ವಿಶ್ವ ಹಿಂಈಖಿ ಪರಿಷತ್ ಜಿಲ್ಲಾ ಕಾರ್ಯದರ್ಶಿ ವಿನಯ ಪಾಟೀಲ್, ಜಿಲ್ಲಾ ಸಂಯೋಜಕ ಕೆ.ಎಂ ದೊಡ್ಡಬಸಯ್ಯ, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಅಯ್ಯನಗೌಡ ಅಳ್ಳಳ್ಳಿ, ಆರ್‌ಎಸ್‌ಎಸ್ ಪ್ರಮುಖರಾದ ಹನುಮಂತರೆಡ್ಡಿ, ಸುರೇಶ ಕುರುಗೋಡ, ಯಂಕಾರೆಡ್ಡಿ ಹೇರೂರು, ಹನುಮೇಶ ಗಂಗಾಮತ, ಜೀವಣ್ಣ ಮರಾಠಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts