More

    ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ 23ರಿಂದ

    ಧಾರವಾಡ: ತಾಲೂಕಿನ ಮನಸೂರಿನ ಶ್ರೀ ರೇವಣಸಿದ್ಧೇಶ್ವರ ವಿದ್ಯಾಪೀಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕನಕ ಜಯಂತಿ ಅಂಗವಾಗಿ ನಗರದಲ್ಲಿ ಜ. 23ರಿಂದ 27ರವರೆಗೆ ಕನಕ ಪಂಚಮಿ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ ಎಂದು ರೇವಣಸಿದ್ಧ್ದೇಶ್ವರ ಮಹಾಮಠದ ಡಾ. ಬಸವರಾಜ ದೇವರು ಹೇಳಿದರು.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೩ ಹಾಗೂ ೨೪ರಂದು ಮನಸೂರ ಮಠದ ಆವರಣದಲ್ಲಿ ಕನಕದಾಸರ ಕಾವ್ಯಗಳ ಕುರಿತು ಚಿಂತನೆ, ಕೀರ್ತನೆ ಆಯೋಜಿಸಲಾಗಿದೆ. ೨೫ರಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಬೆಳಗ್ಗೆ ೧೦.೩೦ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಕನಕದಾಸರ ಬದುಕು- ಬರಹ, ಸಂದೇಶ ಕುರಿತು ವಿಚಾರ ಸಂಕಿರಣ, ಕನಕ ಕವಿಗೋಷ್ಠಿಗಳು ನಡೆಯಲಿವೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಕರ್ನಾಟಕ ಕುರುಬರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಿಂಗಪ್ಪ ಸವಣೂರ ಉಪಸ್ಥಿತರಿರುವರು. ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ವಿಭಾಗದ ಸಂಯೋಜಕ ಪ್ರೊ. ಹನುಮಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಪ್ರೊ. ಕೆ.ಎಸ್. ಕಟಗಿ ಹಾಗೂ ಪ್ರೊ. ವೈ.ಎಂ. ಯಾಕೊಳ್ಳಿ ಕನಕದಾಸರ ಸಾಹಿತ್ಯ ಹಾಗೂ ಕಾವ್ಯಗಳಲ್ಲಿ ಮಾನವೀಯ ಮೌಲ್ಯಗಳು ಕುರಿತು ಚಿಂತನೆ ನಡೆಸುವರು ಎಂದರು. ೨೬ರAದು ಬೆಳಗ್ಗೆ ೧೧ ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆವಿಶ್ವ ಸಂತ ಕನಕ ಪ್ರಶಸ್ತಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇವೇಳೆ ವಿವಿಧ ಕ್ಷೇತ್ರಗಳ ೫೧ ಸಾಧಕರಿಗೆ `ಕನಕ’ ಪ್ರಶಸ್ತಿಯನ್ನು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಪ್ರದಾನ ಮಾಡುವರು. ೨೭ರಂದು ಸಮಾರೋಪ ಸಮಾರಂಭ ನಡೆಯಲಿವೆ ಎಂದರು.
    ಕನಕದಾಸರನ್ನು ದೇಶದ ಸಾಂಸ್ಕೃತಿಕ ನಾಯಕ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗುರುತಿಸಬೇಕು. ಗೋಟಗೋಡಿಯ ಜಾನಪದ ವಿಶ್ವವಿದ್ಯಾಲಯಕ್ಕೆ ಕನಕದಾಸ ಹೆಸರು ಇಡಬೇಕು. ಕನಕದಾಸರ ಮಠವನ್ನು ಸ್ಥಾಪಿಸಬೇಕು ಎಂದು ಡಾ. ಬಸವರಾಜ ದೇವರು ಒತ್ತಾಯಿಸಿದರು.
    ಸುದ್ದಿಗೋಷ್ಠಿಯಲ್ಲಿ ಕಲಾವಿದ ಪ್ರಭು ಹಂಚಿನಾಳ, ಬಿ.ಎಸ್. ಕೌಜಲಗಿ, ರಮೇಶ ನಲವಡಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts