More

    ಶ್ರೀರಾಮುಲು ಕೊಟ್ಟ ಮಾತಿಗೆ ಬದ್ಧರಾಗಿರಲಿ- ಶಾಸಕ ಜೆ.ಎನ್.ಗಣೇಶ್ ಹೇಳಿಕೆ

    ಕಂಪ್ಲಿ: ಶೇ.7.5 ಮೀಸಲಾತಿ ವಿಚಾರದಲ್ಲಿ ಸಚಿವ ಬಿ. ಶ್ರೀರಾಮುಲು ಕೊಟ್ಟ ಮಾತಿಗೆ ಬದ್ಧರಾಗಿರಲಿ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

    ತಾಲೂಕಿನ ರಾಮಸಾಗರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ 2020-21ನೇಸಾಲಿನ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಯೋಜನೆಯಡಿ 1 ಕೋಟಿ ರೂ. ವೆಚ್ಚದಲ್ಲಿ ಪ್ರೌಢಶಾಲೆಯನ್ನು ಮಾದರಿ ಶಾಲೆಯಾಗಿಸುವ ಅಭಿವೃದ್ಧಿ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಶ್ರೀರಾಮುಲು, 20 ದಿನಗಳಲ್ಲಿ ಶೇ.7.5 ಮೀಸಲಾತಿ ಘೋಷಣೆಯಾಗದಿದ್ದಲ್ಲಿ ರಾಜೀನಾಮೆ ನೀಡುವುದಾಗಿ ಹೇಳಿಕೆ ಕೊಟ್ಟಿದ್ದರು. ಅದರಂತೆ ನಡೆದುಕೊಳ್ಳಲಿ. ಈ ಹಿಂದೆ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಹೇಳಿದ್ದನ್ನು ಜನತೆ ಗಮನಿಸಿದ್ದಾರೆ. ಸಚಿವ ಸ್ಥಾನದಲ್ಲಿರುವ ಅವರು, ಅಧಿಕಾರಕ್ಕೆ ಅಂಟಿಕೊಳ್ಳದೆ ತಮ್ಮ ಮಾತಿಗೆ ಬದ್ಧರಾಗಿರಲಿ ಎಂದರು.

    ಸೋಮಲಾಪುರ ಗ್ರಾಮಸ್ಥರ ಬೇಡಿಕೆಯಂತೆ ಅಲ್ಲಿನ ಸಹಿಪ್ರಾ ಶಾಲೆಯನ್ನು 1 ಕೋಟಿ ರೂ. ವೆಚ್ಚದಲ್ಲಿ ಮಾದರಿ ಶಾಲೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಇದಲ್ಲದೆ 1 ಕೋಟಿ ರೂ. ವೆಚ್ಚದಲ್ಲಿ ಕರ್ಚೇಡ್-ಹಂದಿಹಾಳ್ ರಸ್ತೆ ಅಭಿವೃದ್ಧಿ ಜತೆಗೆ 50ಲಕ್ಷ ರೂ.ವೆಚ್ಚದ ದಮ್ಮೂರು-ಕೊರಲಗುಂದಿ ಸೇತುವೆ ನಿರ್ಮಾಣ ಮಾಡಲಾಗುವುದು ಎಂದರು.

    ರಾಜ್ಯದಲ್ಲಿ 68 ಸೇತುವೆ ನಿರ್ಮಾಣ ಮಾಡಲು ಡಿಪಿಆರ್, ಎಸ್ಟಿಮೇಟ್ ಆಗಿದ್ದು, ಮೊದಲ ಹಂತದಲ್ಲಿ 20 ಸೇತುವೆಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಮೊದಲ ಆದ್ಯತೆಯಲ್ಲಿ ಕಂಪ್ಲಿ ತುಂಗಭದ್ರಾ ನದಿಗೆ ಸೇತುವೆ ನಿರ್ಮಿಸುವಂತೆ ಸಿಎಂ ಬೊಮ್ಮಾಯಿ ಅವರನ್ನು ಖುದ್ದು ಭೇಟಿಯಾಗಿರುವುದಲ್ಲದೆ, ಅಧಿವೇಶನದಲ್ಲೂ ಒತ್ತಾಯಿಸಿದ್ದೇನೆ ಎಂದರು.

    ಎಸ್‌ಡಿಎಂಸಿ ಅಧ್ಯಕ್ಷ ಪಿ.ಮುಕ್ಕಣ್ಣ ಮಾತನಾಡಿ, ಶಾಲೆಗೆ ಕಾಂಪೌಂಡ್ ನಿರ್ಮಿಸಿಕೊಡುವಂತೆ ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ನರೇಗಾ ಯೋಜನಡಿ ನಿರ್ಮಿಸಿಕೊಡುವಂತೆ ಪಿಡಿಒಗೆ ಸೂಚಿಸಿದರು.

    ಪ್ರಮುಖರಾದ ಎಚ್.ಶಿವಶಂಕರಗೌಡ, ಬಿ.ನಾರಾಯಣಪ್ಪ, ಎಚ್.ಜಗದೀಶಗೌಡ, ಎಚ್.ಟಿ. ರಾಜಶೇಖರಗೌಡ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಆರ್.ಎಂ. ರಾಮಯ್ಯ, ವಾಮದೇವಪ್ಪ, ಸಿ.ರಾಮು, ಪ್ರಭಾರ ಮುಖ್ಯಗುರು ಸುಗ್ಗೇನಹಳ್ಳಿ ರಮೇಶ್, ಗುತ್ತಿಗೆದಾರ ರಂಗನಾಯಕಲು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts