More

    ರಸ್ತೆ, ವೃತ್ತಗಳಿಗೆ ಜಕಣಾಚಾರಿ ಹೆಸರಿಡಿ

    ಕಂಪ್ಲಿ: ಪಟ್ಟಣದ ರಸ್ತೆ, ವೃತ್ತಗಳಿಗೆ ಅಮರಶಿಲ್ಪಿ ಜಕಣಾಚಾರಿ ಹೆಸರಿಡಬೇಕು ಎಂದು ಡಿ.ಹಿರೇಹಾಳ್‌ನ ವಿಶ್ವಕರ್ಮ ಜಗದ್ಗುರು ಶ್ರೀಕಾಳಹಸ್ತ್ಯೇಂದ್ರ ಸ್ವಾಮೀಜಿ ಒತ್ತಾಯಿಸಿದರು.

    ಇಲ್ಲಿನ ತಹಸಿಲ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯ ಸಾನ್ನಿಧ್ಯವಹಿಸಿ ಮಾತನಾಡಿದರು.

    ಅಮರಶಿಲ್ಪಿ ಜಕಣಾಚಾರಿ ಅವರ ಕೆತ್ತನೆಯ ಕುಸುರಿ ಕಲೆ ಗಮನಿಸಿ ಸರ್ಕಾರವೇ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಆಚರಿಸುತ್ತಿರುವುದು ವಿಶ್ವಕರ್ಮರಿಗೆ ಹೆಮ್ಮೆಯ ವಿಷಯ. ವಿಶ್ವಕರ್ಮರ ಸಾಧನೆಯನ್ನು ಮುಖ್ಯವಾಹಿನಿಗೆ ತರಲು ಜಕಣಾಚಾರಿ ಅವರ ಹೆಸರುಗಳನ್ನು ಸಾರ್ವಜನಿಕ ಸ್ಥಳಗಳಿಗೆ ನಾಮಕರಣಗೊಳಿಸಬೇಕು ಎಂದರು.

    ತಹಸೀಲ್ದಾರ್ ಶಿವರಾಜ ಮಾತನಾಡಿ, ಜಕಣಾಚಾರಿ ಅವರು ಶಿಲೆಯಲ್ಲಿ ಶಿಲ್ಪಗಳನ್ನು ಮೂಡಿಸುವ ಮೂಲಕ ಮಹಾಕಾವ್ಯಗಳನ್ನು ರಚಿಸಿದ್ದಾರೆ. ಚನ್ನಕೇಶವ ದೇವಾಲಯದ ಶಿಲಾಕುಸುರಿ ಕಾರ್ಯ ಅನನ್ಯವಾಗಿದೆ ಎಂದರು. ಇದೇ ವೇಳೆ ಏ.21ರಂದು ಚಿಕ್ಕಕಲ್ಲೂರು ಸಿದ್ಧಪ್ಪಾಜಿ ದೇವಸ್ಥಾನದಲ್ಲಿ ಜರುಗಲಿರುವ ವಿಶ್ವಕರ್ಮರ ಉಚಿತ ಸಾಮೂಹಿಕ ವಿವಾಹದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.

    ಶಿರಸ್ತೇದಾರ್ ಎಸ್.ಡಿ.ರಮೇಶ್, ವಿಎಗಳಾದ ಲಕ್ಷ್ಮಣನಾಯ್ಕ, ವಿಜಯಕುಮಾರ್, ಮಾಲತೇಶ, ಕೃಷಿ ಅಧಿಕಾರಿ ಶ್ರೀಧರ್, ವಿಶ್ವಕರ್ಮ ಸಮಾಜದ ಪ್ರಮುಖರಾದ ರಾಮಚಂದ್ರಚಾರ್, ಕಾಳಾಚಾರ್, ಎಂ.ಮಂಜುನಾಥ, ಎ.ಯರ‌್ರಿಸ್ವಾಮಿ, ನಾರಾಯಣಾಚಾರ್, ಅಳ್ಳಳ್ಳಿ ಮೌನೇಶ, ಗಾಯತ್ರಿ, ಚಂದ್ರಶೇಖರ್, ವೀರಭದ್ರಾಚಾರ್, ಡಾ.ವೇದಮೂರ್ತಿ, ಮೆಟ್ರಿ ಷಣ್ಮುಖಾಚಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts