More

    ಎಲ್ಲ ಸಮಸ್ಯೆಗಳಿಗೂ ಶರಣ ಸಂಸ್ಕೃತಿ ಪರಿಹಾರ

    ಕಂಪ್ಲಿ: ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಶರಣ ಸಂಸ್ಕೃತಿಯಲ್ಲಿ ಸರಳ ಪರಿಹಾರಗಳಿವೆ ಎಂದು ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಪಟ್ಟಣದ ಅಕ್ಕಮಹಾದೇವಿ ಮಹಿಳಾ ಮಂಡಳಿಯಿಂದ ಅಕ್ಕ ಜಯಂತ್ಯುತ್ಸವ ನಿಮಿತ್ತ ಮಂಗಳವಾರ ಸಾಂಸ್ಕೃತಿಕ ಹಾಗೂ ನಾಟಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಶರಣರ ವಚನಗಳಲ್ಲಿ ಆಧುನಿಕ ಸಮಸಮಾಜ ನಿರ್ಮಾಣದೊಂದಿಗೆ ಸರ್ವ ಜೀವಿಗಳು ಸಂತುಷ್ಟತೆಯಿಂದ ಬದುಕಿ ಬಾಳುವಂತೆ ಪ್ರೇರೇಪಿಸುವ ತತ್ವಗಳಿವೆ ಎಂದರು.

    ಇದನ್ನೂ ಓದಿ: ನಾಟಕಗಳ ಪ್ರದರ್ಶನವಿಂದು ದುಬಾರಿಯಾಗಿದೆ

    ಶರಣ ಚಿಂತನೆ ಮೈಗೂಡಿಸಿಕೊಳ್ಳಿ

    ಎಮ್ಮಿಗನೂರಿನ ಕೆಪಿಎಸ್ ಪ್ರೌಢಶಾಲೆ ಶಿಕ್ಷಕಿ ಡಾ.ಸಾವಿತ್ರಿ ರಾಜಶೇಖರ್ ಮಾತನಾಡಿ, ಮಕ್ಕಳಿಗೆ ಶರಣರ ವಚನಗಳ ಮಹತ್ವವನ್ನು ಬಾಲ್ಯದಲ್ಲಿಯೇ ತಿಳಿಸಿಕೊಡುವ ಜತೆಗೆ ಶರಣ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವಂತೆ ಶಿಕ್ಷಣ ನೀಡಬೇಕೆಂದು ಸಲಹೆ ನೀಡಿದರು.

    ಕದಳಿಯಡೆಗೆ ನಾಟಕ ಪ್ರದರ್ಶನ

    ಕಲ್ಗುಡಿ ಬಸವಂತಮ್ಮ ಗುರುಸಿದ್ದಪ್ಪ ರಚಿಸಿ, ನಿರ್ದೇಶಿಸಿದ ಕಲ್ಯಾಣದಿಂದ ಕದಳಿಯಡೆಗೆ ನಾಟಕ ಪ್ರದರ್ಶನಗೊಂಡಿತು. ಅಕ್ಕಮಹಾದೇವಿಯಾಗಿ ಕಲ್ಗುಡಿ ರಶ್ಮಿ ಶರಣಪ್ಪ, ಅಲ್ಲಮಪ್ರಭುವಾಗಿ ಮುಕ್ಕುಂದಿ ಮಮತಾ, ಬಸವಣ್ಣನಾಗಿ ವಾಲಿ ಸೌಮ್ಯಗುರು, ಚನ್ನಬಸವಣ್ಣನಾಗಿ ಗೌತಮಿ ರಾಕೇಶ್, ಸಿದ್ಧರಾಮೇಶನಾಗಿ ಸುಮಂಗಳಾ ಸೇರಿ ಮಹಿಳೆಯರು ನಾನಾ ಪಾತ್ರಧಾರಿಗಳಾಗಿ ಮನೋಜ್ಞವಾಗಿ ಅಭಿನಯಿಸಿದರು.

    ಪ್ರಮುಖರು ಭಾಗಿ

    ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ಹೊಸಪೇಟೆ ವಿಜಯನಗರ ಕಾಲೇಜಿನ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ, ಪುರಸಭಾಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ, ವೀರಶೈವ ಸಂಘದ ತಾಲೂಕು ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ, ವೀರಶೈವ ಸಮಾಜದ ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಅರವಿ ಬಸವನಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts