More

    ಸರ್ಕಾರಿ ಶಾಲೆಗೆ ಸೇರಿಸಿ, ಕನ್ನಡವ ಕಾಪಾಡಿ

    ಕಂಪ್ಲಿ: ಕನ್ನಡ ಭಾಷೆಯ ಉಳಿಸಿ ಬೆಳೆಸಲು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಹೇಳಿದರು.

    ರಾಮಸಾಗರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಂಭ್ರಮದ ಮೆರವಣಿಗೆಗೆ ಶನಿವಾರ ಚಾಲನೆ ನೀಡಿ, ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಪೋಷಕರು ಜಾಗೃತಿ ತೋರಬೇಕು ಎಂದರು. ಬಿಇಒ ಚನ್ನಬಸಪ್ಪ ಮಗ್ಗದ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಸ್ಪರ್ಧಾತ್ಮಕ ಶಿಕ್ಷಣ ನೀಡಲು ಅನುಕೂಲವಾಗುವಂತೆ ಶತಮಾನೋತ್ಸವ ಶಾಲೆಯಲ್ಲಿ ಗ್ರಾಮಸ್ಥರ ಸಹಕಾರದಿಂದ ಸ್ಮಾರ್ಟ್‌ಕ್ಲಾಸ್, ಪೀಠೋಪಕರಣ, ರೀಡಿಂಗ್ ಕಾರ್ನರ್ ಸೇರಿ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಡಿಎಂಎಫ್ ಅನುದಾನದಡಿ ಹತ್ತು ಕೊಠಡಿಗಳನ್ನು ನಿರ್ಮಿಸಲು ಶಾಸಕರಿಗೆ ಮನವಿ ಸಲ್ಲಿಸಿದೆ. 40 ಲಕ್ಷ ರೂಪಾಯಿಗಳಲ್ಲಿ ಗ್ರಾಮಾಡಳಿತದಿಂದ ಶಾಲಾವರಣ ಗೋಡೆ ಎತ್ತರಿಸುವ ಕಾಮಗಾರಿಗೆ ಚಾಲನೆ ದೊರಕಲಿದೆ. ಶತಮಾನೋತ್ಸವ ಶಾಲೆ ಗ್ರಾಮೀಣ ಮಕ್ಕಳಿಗೆ ವರದಾನವಾಗಿ ಪರಿಣಮಿಸಿದೆ ಎಂದರು.

    ಶಾರದಾದೇವಿ ಭಾವಚಿತ್ರ ಮೆರವಣಿಗೆಯಲ್ಲಿ ಕಹಳೆ, ಪೂರ್ಣಕುಂಭ, ಕಳಸಾಧಾರತಿ, ಹುಲಿಕುಣಿತ, ಡೊಳ್ಳುಕುಣಿತ, ಕೋಲಾಟ, ದಾರ್ಶನಿಕ ಛದ್ಮವೇಶಧಾರಿ ಮಕ್ಕಳು, ಮಕ್ಕಳ ಕವಾಯಿತು ಸೇರಿ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಜಯನಗರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಕೊಟ್ರೇಶ್, ಮುಖ್ಯಶಿಕ್ಷಕಿ ಖುರ್ಷಿದ್‌ಬೇಗಮ್, ಗ್ರಾಪಂ ಅಧ್ಯಕ್ಷೆ ಬಿ.ಎಂ.ಶಿವಲೀಲಾ ಮತ್ತು ಸದಸ್ಯರು, ಪ್ರಮುಖರಾದ ಎಚ್.ಶಿವಶಂಕರಗೌಡ, ಜಗನ್ನಾಥಗೌಡ, ಬಿ.ನಾರಾಯಣಪ್ಪ, ಎಂ.ಎ.ನಾಗನಗೌಡ, ಸುಮತಿ, ರಮೇಶ್‌ಗೌಡ, ಕುಮಾರಸ್ವಾಮಿ, ರೇವಣಸಿದ್ಧಯ್ಯ, ಕರಿಬಸಯ್ಯ, ರಾಜಶೇಖರಗೌಡ, ಕರೆಂಟ್ ಗೋಪಾಲಪ್ಪ, ವಾಮದೇವಪ್ಪ, ಎಂ.ಶಿವಕುಮಾರ್, ಪ್ರದೀಪ್ ಚಾವಡಿ, ಜಿ.ವೀರೇಶ್, ಜಿ.ಹನುಮಂತಪ್ಪ, ಕೆ.ಲಕ್ಷ್ಮಿದೇವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts