More

    ರೈತರ ಮೇಲಿನ ಪ್ರಕರಣ ಕೈಬಿಡಲು ಒತ್ತಾಯ

    ಕಂಪ್ಲಿ: ರಾಜ್ಯದ ರೈತರ ಮೇಲಿನ ಎಲ್ಲ ಪ್ರಕರಣಗಳನ್ನು ಕೈಬಿಡುವಂತೆ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

    ಐಸಿಸಿ ಸಭೆ ನ.20ರಂದು ನಡೆಯಲಿರುವ ಹಿನ್ನೆಲೆಯಲ್ಲಿ, ಶಾಸಕರ ಕಚೇರಿ ಆವರಣದಲ್ಲಿ ರೈತರ ಸಭೆ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದರು. ಐಸಿಸಿ ಸಭೆಯಲ್ಲಿ ರೈತರು ಮಾತನಾಡಲು ಅವಕಾಶ ನೀಡುವಂತೆ ಸಚಿವರನ್ನು ಒತ್ತಾಯಿಸಿ ಅವಕಾಶ ಕೊಡಿಸುತ್ತೇನೆ. ಎಲ್‌ಎಲ್ ಕಾಲುವೆಗೆ ಏಪ್ರಿಲ್ 30ರ ತನಕ, ಎಚ್‌ಎಲ್ ಕಾಲುವೆಗೆ ಮಾರ್ಚ್ 31ರ ತನಕ ನೀರು ಹರಿಸುವಂತೆ ಒತ್ತಾಯಿಸುತ್ತೇನೆ. ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ತಂದಿದ್ದಾದರೆ ಎಲ್ಲ ಕಡೆ ಅಂಚಿನ ರೈತರ ಭೂಮಿಗೆ ನೀರೋದಗಿಸುವ ಯೋಜನೆ ಹಮ್ಮಿಕೊಳ್ಳಲಾಗುವುದು. ಪಟ್ಟಣದಲ್ಲಿ ಶಾಶ್ವತ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು. ರೈತರ ಗಮನಕ್ಕೆ ತಾರದೆ ಕಾಲುವೆಯ ಡಿಜೈನ್, ಲೈನಿಂಗ್ ಬದಲಿಸಿದ್ದರಿಂದ ರೈತರ ಭೂಮಿಗೆ ನೀರೊದಗುವುದು ಕಷ್ಟವಾಗಿದೆ. ಕಂಪ್ಲಿಯಲ್ಲಿ ಸರ್ಕಾರಿ ಅಥವಾ ಸಹಕಾರ ರಂಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಬೇಕು ಎಂದರು.

    ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಸೇರಿ ರೈತರು ಮಾತನಾಡಿ, ಮಾರ್ಚ್ 31ರತನಕ ನೀರು ಹರಿಸಲು ಟಿಬಿ ಬೋರ್ಡ್‌ನ ಅಧಿಕಾರಿಗಳು ಒಪ್ಪಿದರೂ, ವಿಭಾಗದ ನೀರಾವರಿ ಅಧಿಕಾರಿಗಳು ನೀರು ಹರಿಸದೆ ರೈತರನ್ನು ವಂಚಿಸುತ್ತಿದ್ದಾರೆ. ಕಡೆ ಅಂಚಿನ ಭೂಮಿಗೂ ನೀರು ತಲುಪಿಸಬೇಕು ಎಂದರು.

    ರಾಮಸಾಗರದ ಲಿಂಗನಗೌಡ ಮಾತನಾಡಿದರು. ರೈತ ಮುಖಂಡರಾದ ಬಿ.ಸದಾಶಿವಪ್ಪ, ಲಕ್ಷ್ಮೀಕಾಂತರೆಡ್ಡಿ, ಕೊಟ್ಟೂರು ರಮೇಶ್, ಎಲ್.ಶ್ರೀನಿವಾಸ್, ಕೆ.ಷಣ್ಮುಖಪ್ಪ, ಸೂಗೂರಪ್ಪ, ಅಂಜಿನಪ್ಪ, ರಮೇಶ್, ಗೋಪಾಲ್, ಶಂಕ್ರಪ್ಪ, ವೀರೇಶ್, ವಿ.ಟಿ.ನಾಗರಾಜ, ಚಿನ್ನ ಹನುಮಂತ, ಬಾದನಹಟ್ಟಿ ಜಡೆಯಪ್ಪ, ಮಲ್ಲಪ್ಪ, ಗೋವಿಂದಪ್ಪ ಸಿಂಧಿಗೇರಿ, ಲಕ್ಷ್ಮಣ, ಟಿಪಿ ವೀರೇಶ್, ಕರೇಕಲ್ ಮನೋಹರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts