More

    ಕುಡಿವ ನೀರಿನ ಘಟಕಕ್ಕೆ ಭೂದಾನ ಕಾರ್ಯ ಶ್ಲಾಘನೀಯ

    ಕಂಪ್ಲಿ: ಶುದ್ಧ ಕುಡಿವ ನೀರಿನ ಘಟಕಕ್ಕೆ ಭೂಮಿ ದಾನ ಮಾಡುವ ಮೂಲಕ ಆದರ್ಶ ಮೆರೆದಿದ್ದಾರೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

    ತಾಲೂಕಿನ ಶ್ರೀ ರಾಮರಂಗಾಪುರದಲ್ಲಿ 2022-23ನೇಸಾಲಿನ ಜಿಲ್ಲಾ ಖನಿಜನಿಧಿಯ 14 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿವ ನೀರಿನ ಘಟಕ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.ತಾಳೂರಿ ನಾರಾಯಣಮ್ಮ ವೆಂಕಟರಮಣಪ್ಪ ಜ್ಞಾಪಕಾರ್ಥವಾಗಿ ಟಿ.ಶ್ರೀನಿವಾಸುಲು, ಟಿ.ಶ್ರೀಧರ ಮೂರ್ತಿಯವರು ಉಚಿತವಾಗಿ ಭೂಮಿ ನೀಡಿದ ಕಾರ್ಯ ಶ್ಲಾಘನೀಯ. ಬಹು ವರ್ಷಗಳ ಬೇಡಿಕೆಯಿದ್ದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಿಬ್ಬಂದಿ ವಸತಿ ಗೃಹ ಕಟ್ಟಡಗಳನ್ನು 4 ಕೋಟಿ ರೂ,ಗಳಲ್ಲಿ ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

    ಸ್ಟ್ಯಾಫ್ ನರ್ಸ್ ಮಂಗಳಮ್ಮ ಮಾತನಾಡಿ, ಗುತ್ತಿಗೆ ಆಧಾರಿತ ನೌಕರರನ್ನು ಖಾಯಂಗೊಳಿಸಿ ಹಾಗೂ ಖಾಲಿ ಇರುವ ಆರೋಗ್ಯ ನಿರೀಕ್ಷಣಾಧಿಕಾರಿ ಎರಡು ಹುದ್ದೆ ಭರ್ತಿ ಮಾಡಬೇಕು. ಶ್ರೀ ರಾಮರಂಗಾಪುರದಿಂದ ದೇವಸಮುದ್ರ, ಚಿಕ್ಕಜಾಯಿಗನೂರು, ಗೋನಾಳ್‌ಗೆ ತೆರಳುವ ರಸ್ತೆಗಳು ಹದೆಗೆಟ್ಟಿದ್ದು, ಚಿಕಿತ್ಸೆ, ಹೆರಿಗೆಗೆ ಎಸ್‌ಆರ್‌ಪುರಕ್ಕೆ ಬರುವಲ್ಲಿ ಗರ್ಭಿಣಿಯರು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಶೀಘ್ರ ರಸ್ತೆ ಅಭಿವೃದ್ಧಿಗೊಳಿಸುವಂತೆ ಶಾಸಕರನ್ನು ಕೋರಿದರು.

    ತಾಪಂ ಮಾಜಿ ಅಧ್ಯಕ್ಷೆ ಉಮಾದೇವಿ, ವೈದ್ಯಾಧಿಕಾರಿ ಡಾ.ಸಂದೀಪ್, ಡಾ.ಸುಭಾಷ್, ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಬಸವರಾಜ್, ಪ್ರಮುಖರಾದ ನಾಗೇಶ್, ಡಿ.ವೆಂಕಟೇಶಲು, ಸಣ್ಣ ಹನುಮಂತ, ಟಿ.ಶೀನಪ್ಪ ಆಶಾ ಕಾರ್ಯಕರ್ತರಾದ ಈರಮ್ಮ, ಮೀನಾಕ್ಷಿ, ನಿರ್ಮಲಾ, ಪದ್ಮಾವತಿ, ನಾಗರತ್ನ, ಈರಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts