More

    ಕಂಪ್ಲಿ ಎಪಿಎಂಸಿ ಬಳ್ಳಾರಿಗೆ ಸೇರಿಸದಂತೆ ಅಕ್ಕಿಗಿರಣಿ ಮಾಲೀಕರ ಸಂಘ ಒತ್ತಾಯ

    ಕಂಪ್ಲಿ: ಸ್ಥಳೀಯ ಎಪಿಎಂಸಿ ಉಪ ಮಾರುಕಟ್ಟೆಯನ್ನು ಬಳ್ಳಾರಿಯ ಎಪಿಎಂಸಿಗೆ ಸೇರಿಸದೆ ಸ್ವತಂತ್ರ (ಪ್ರತ್ಯೇಕ) ಗೊಳಿಸದಿದ್ದಲ್ಲಿ ಅಕ್ಕಿಗಿರಣಿಗಳನ್ನು ಬಂದ್ ಮಾಡಿ ತೀವ್ರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಎಚ್ಚರಿಸಿದರು.

    ಇಲ್ಲಿನ ಎಪಿಎಂಸಿ ಉಪ ಮಾರುಕಟ್ಟೆ ಆವರಣದಲ್ಲಿ ಶನಿವಾರ ಮಾತನಾಡಿದರು. ಯಾವುದೇ ಕಾರಣಕ್ಕೂ ಇಲ್ಲಿನ ಎಪಿಎಂಸಿ ಉಪ ಮಾರುಕಟ್ಟೆಯನ್ನು ಬಳ್ಳಾರಿಯ ಎಪಿಎಂಸಿಗೆ ಸೇರಿಸಬಾರದು. 1973ರಲ್ಲಿ ಸ್ಥಾಪನೆಯಾದ ಉಪ ಮಾರುಕಟ್ಟೆ ಸಮಸ್ತ ಕೃಷಿಕ ಮತ್ತು ಕೃಷಿ ಅವಲಂಬಿತ ಕೈಗಾರಿಕೋದ್ಯಮಿಗಳಿಗೆ ವರದಾನವಾಗಿದೆ. ಪ್ರತಿ ವರ್ಷವೂ ಹೊಸಪೇಟೆ ಎಪಿಎಂಸಿಗಿಂತ ಕಂಪ್ಲಿಯ ಉಪ ಮಾರುಕಟ್ಟೆ ಅಧಿಕ ಮಾರುಕಟ್ಟೆ ಶುಲ್ಕ ಪಾವತಿಸುತ್ತ ಬಂದಿದ್ದು, ಉಪ ಮಾರುಕಟ್ಟೆಯನ್ನು ಸ್ವತಂತ್ರ ಮಾರುಕಟ್ಟೆಯನ್ನಾಗಿ ರೂಪಿಸಬೇಕು ಎಂದು ಒತ್ತಾಯಿಸಿದ ಅಕ್ಕಿಗಿರಣಿ ಮಾಲೀಕರು, ಮಾರುಕಟ್ಟೆಯ ಸಹಾಯಕ ಕಾರ್ಯದರ್ಶಿ ಎಸ್.ವೆಂಕಟಕೃಷ್ಣಗೆ ಮನವಿ ಸಲ್ಲಿಸಿದರು.

    ಅಕ್ಕಿಗಿರಣಿ ಮಾಲೀಕರ ಸಂಘದ ಪದಾಧಿಕಾರಿಗಳಾದ ಜಿ.ಕೇದಾರೇಶ್ವರರಾವ್, ಜಿ.ವಿನಯ್, ಜಿ.ಪಿ.ಶ್ರೀನಿವಾಸ್, ಜಿ.ನರಸಿಂಹಲು, ಬಸವರಾಜ, ತಿಪ್ಪೇಸ್ವಾಮಿ, ಕೆ.ವೀರಾಂಜನೇಯಲು, ಎಂ.ಶ್ರೀನಿವಾಸ್, ಟಿ.ಕೊಟ್ರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts