More

    ಸಾಧನೆಗೆ ಬಾಹ್ಯ-ಆಂತರಿಕ ಪರಿಶುದ್ಧತೆ ಅಗತ್ಯ

    ಕಂಪ್ಲಿ: ಸಮ ಸಮಾಜ ನಿರ್ಮಾಣಕ್ಕೆ ವಚನ ಸಾಹಿತ್ಯ ಬುನಾದಿಯಾಗಿದ್ದು, ಪ್ರಸ್ತುತ ದಿನಗಳಲ್ಲಿ ಅನುಷ್ಠಾನ ಆಗಬೇಕಿದೆ ಎಂದು ಇಲ್ಲಿನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಆಜಾದ್ ಟ್ರಸ್ಟ್ ಸಂಚಾಲಕ ಬಡಿಗೇರ ಜಿಲಾನ್‌ಸಾಬ್ ಹೇಳಿದರು.

    ಇಲ್ಲಿನ ಗಂಗಾ ಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಶನಿವಾರ ಹಮ್ಮಿಕೊಂಡಿದ್ದ 161ನೇ ಮಹಾಮನೆ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ದರ್ಶನ ಕುರಿತು ಮಾತನಾಡಿದರು.

    ಜೀವನಾವಶ್ಯಕ ಸಾಧನೆಗೆ ಬಾಹ್ಯ ಮತ್ತು ಆಂತರಿಕ ಪರಿಶುದ್ಧತೆ ಅಗತ್ಯ. ತರ್ಕಬದ್ಧ ಕಾಯಕದಿಂದ ದೇಶ ಪ್ರಗತಿ, ದಾಸೋಹದಿಂದ ಸಮಾನತೆ ಸಾಧಿಸಬಹುದೆಂಬುದು ಶಿವಶರಣರ ಆಶಯವಾಗಿತ್ತು ಎಂದರು.

    ತಾಲೂಕು ವೀರಶೈವ ಸಂಘದ ಕಾರ್ಯದರ್ಶಿ ಎಚ್.ನಾಗರಾಜ ಮಾತನಾಡಿದರು. ಶಸಾಪ ತಾಲೂಕು ಅಧ್ಯಕ್ಷ ಜಿ.ಪ್ರಕಾಶ್ ಅಧ್ಯಕ್ಷತೆವಹಿಸಿದ್ದರು. ನಿವೃತ್ತ ಮುಖ್ಯಶಿಕ್ಷಕ ಚಂದ್ರಶೇಖರ, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪಾಠಶಾಲೆ ಪ್ರಾಚಾರ್ಯ ಘನಮಠಯ್ಯ ಹಿರೇಮಠ, ಪ್ರಮುಖರಾದ ಡಬ್ಲುೃ.ಬಸವರಾಜ, ಎಸ್.ಡಿ.ಬಸವರಾಜ, ಸಜ್ಜೇದ ವೀರಭದ್ರಪ್ಪ, ಚಂದ್ರಯ್ಯ ಸೊಪ್ಪಿಮಠ, ಬಂಗಿ ಸರೋಜಾ ಹೆಗಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts