More

    5 ಮತ್ತು 8ನೇ ತರಗತಿಗಳ ಮೌಲ್ಯಾಂಕನ ಪರೀಕ್ಷೆ ಸುಸೂತ್ರ

    ಕಂಪ್ಲಿ: ಇದೇ ಮೊದಲ ಬಾರಿಗೆ 5 ಮತ್ತು 8ನೇ ತರಗತಿಗಳ ರಾಜ್ಯಮಟ್ಟದ ಮೌಲ್ಯಾಂಕನ(ಬೋರ್ಡ್)ಪರೀಕ್ಷೆಗಳು ಸೋಮವಾರ ಆರಂಭಗೊಂಡಿದ್ದು, ಮೊದಲ ದಿನದ ಪರೀಕ್ಷೆಯಲ್ಲಿ ಒಟ್ಟು 37ವಿದ್ಯಾರ್ಥಿಗಳು ಗೈರಾಗಿದ್ದರು.

    ಶಿಕ್ಷಣ ಸಂಯೋಜಕ ಜಿ.ವೀರೇಶ್ ಮಾತನಾಡಿ, ತಾಲೂಕಿನ ಐದು ಕ್ಲಸ್ಟರ್‌ಗಳಲ್ಲಿ ಪರೀಕ್ಷೆಗಳು ಶಾಂತಿಯುತವಾಗಿ ನಡೆದವು. ತಾಲೂಕಿನ ಐದು ಕ್ಲಸ್ಟರ್(ಎಮ್ಮಿಗನೂರು ಕ್ಲಸ್ಟರ್ ಹೊರತುಪಡಿಸಿ)ಗಳಲ್ಲಿ ಒಟ್ಟು 73 ಪ್ರಾಥಮಿಕ ಶಾಲೆಗಳ 5ನೇ ತರಗತಿಯ 1004ವಿದ್ಯಾರ್ಥಿ, 1033ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, 10ವಿದ್ಯಾರ್ಥಿ, 7ವಿದ್ಯಾರ್ಥಿನಿಯರು ಗೈರಾಗಿದ್ದಾರೆ.

    29ಪ್ರೌಢಶಾಲೆಗಳ 8ನೇತರಗತಿಯ 984ವಿದ್ಯಾರ್ಥಿ, 968ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, 14 ವಿದ್ಯಾರ್ಥಿ, 6 ವಿದ್ಯಾರ್ಥಿನಿಯರು ಗೈರಾಗಿದ್ದಾರೆ. ಬೇರೆ ಶಾಲೆಗಳ ಶಿಕ್ಷಕರನ್ನು ಪರೀಕ್ಷಾ ಕೊಠಡಿಗಳ ಮೇಲ್ವಿಚಾರಕರನ್ನಾಗಿ ನೇಮಿಸಿದೆ. ಸ್ಥಾನಿಕ ಜಾಗೃತಿ ದಳ ಸದಸ್ಯರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts