More

    ಗೋಕಾಕ್ ಚಳವಳಿಯಲ್ಲಿ ರಾಜ್ ಪಾತ್ರ ದೊಡ್ಡದು

    ಕಂಪ್ಲಿ: ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳು ಮಾನವೀಯ ಮೌಲ್ಯಗಳುಳ್ಳ ಸಮಾನತೆಯ ಜಗತ್ತನ್ನು ಸೃಷ್ಟಿಸುತ್ತವೆ ಎಂದು ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಹೇಳಿದರು.

    ಮಹಾಸ್ತೂಪ ಡಾ.ರಾಜಕುಮಾರ್ ಜ್ಞಾನಮಂದಿರ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತ್ಯುತ್ಸವ, ಡಾ.ರಾಜಕುಮಾರ್ ಜನ್ಮೋತ್ಸವ ಮತ್ತು ಡಾ.ಪುನೀತ್‌ರಾಜಕುಮಾರ್ ಸ್ಮರಣೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಗೋಕಾಕ್ ಚಳವಳಿಯ ಯಶಸ್ಸಿನಲ್ಲಿ ಡಾ.ರಾಜಕುಮಾರ್ ಪಾತ್ರ ಮಹತ್ವದ್ದಾಗಿದೆ. ಪುನೀತ್ ರಾಜಕುಮಾರ್ ಕಿರಿಯ ವಯಸ್ಸಿನಲ್ಲಿಯೇ ಸಾಧಿಸಿದ ಸಾಧನೆ ಅಪಾರ ಎಂದರು. ಮಹಾಸ್ತೂಪ ಡಾ.ರಾಜಕುಮಾರ್ ಜ್ಞಾನಮಂದಿರದ ಕಾರ್ಯದರ್ಶಿ ಸಿ.ವೆಂಕಟೇಶ್ ಮಾತನಾಡಿ, ಪುನೀತ್ ರಾಜಕುಮಾರ್‌ಗೆ ಕಂಪ್ಲಿಯ ಮಹಾಸ್ತೂಪ ಡಾ.ರಾಜಕುಮಾರ್ ಶಾಲೆಯ ಮೇಲೆ ಅಪಾರ ಅಭಿಮಾನವಿತ್ತು. ಶಾಲೆಗೆ ಭೇಟಿ ಕೊಡುವುದಾಗಿ ನೀಡಿದ್ದ ಭರವಸೆ ಕನಸಾಗಿ ಉಳಿಯಿತು ಎಂದರು. ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ, ಪ್ರಮುಖರಾದ ಮರಿಯಪ್ಪ ಕುಂಟೋಜಿ, ಸಿ.ಆರ್.ಹನುಮಂತ, ಬಿ.ಸಿದ್ದಪ್ಪ, ಜಿ.ರಾಮಣ್ಣ, ಕೆ.ಎಸ್.ಚಾಂದ್‌ಬಾಷ, ಬಿ.ನಾಗೇಂದ್ರ, ಕೆ.ಮನೋಹರ, ಕೆ.ಮೆಹಬೂಬ್, ಕೆ.ಲಕ್ಷ್ಮಣ, ಎಚ್.ರಾಮಚಂದ್ರ, ಸಿ.ಮಮತಾ ವೆಂಕಟೇಶ್ ಇತರರಿದ್ದರು.

    ಗೋಕಾಕ್ ಚಳವಳಿಯಲ್ಲಿ ರಾಜ್ ಪಾತ್ರ ದೊಡ್ಡದು


    ಅಣ್ಣಾವ್ರ ಭಾವಚಿತ್ರಕ್ಕೆ ಪೂಜೆ

    ಬಳ್ಳಾರಿ: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ವಾರ್ತಾ-ಸಾರ್ವಜನಿಕ ಸಂಪರ್ಕ ಇಲಾಖೆ ಆಶ್ರಯದಲ್ಲಿ ಡಾ.ರಾಜಕುಮಾರ್ ಜಯಂತಿಯನ್ನು ಭಾನುವಾರ ಆಚರಿಸಲಾಯಿತು. ಡಿಸಿ ಕಚೇರಿಯ ತಹಸೀಲ್ದಾರ್ ಹೊನ್ನಮ್ಮ ಡಾ.ರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ಸಣ್ಣ ಉಳಿತಾಯ ಮತ್ತು ಋಣ ನಿರ್ವಹಣೆ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನೂರಪ್ಪ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ ರವೀಂದ್ರಬಾಬು, ಬ್ಬಂದಿ ಗುರು, ಹನುಮಂತಪ್ಪ, ಹನುಮೇಶ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts