More

    ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆಯಿರಿ

    ಕಮಲಾಪುರ: ಯಾವುದೇ ರೋಗದ ಬಗ್ಗೆ ನಿರುತ್ಸಾಹ ತೋರದೆ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಜೀವಹಾನಿಯಂಥ ಅನಾಹುತ ತಪ್ಪಿಸಬಹುದಾಗಿದೆ ಎಂದು ಕಮಲಾಪುರ ಪದವಿ ಕಾಲೇಜಿನ ಪ್ರಾಚಾರ್ಯೆ ಡಾ.ಅಮೃತಾ ಕಟಕೆ ಹೇಳಿದರು.

    ಓಕಳಿ ಗ್ರಾಮದಲ್ಲಿ ಕಮಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಭಾರತೀಯ ರೆಡ್ಡ್ ಕ್ರಾಸ್, ಕಲಬುರಗಿಯ ಯುನೈಟೆಡ್ ಆಸ್ಪತ್ರೆ, ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆ, ನಿಜಲಿಂಗಪ್ಪ ಡೆಂಟಲï ಕಾಲೇಜು ಸಹಯೋಗದಡಿ ಗುರುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು, ಗ್ರಾಮೀಣ ಜನತೆಗೆ ಉತ್ತಮ ಆರೋಗ್ಯ ಒದಗಿಸುವ ಉದ್ದೇಶದಿಂದ ನಾವೆಲ್ಲ ಇಲ್ಲಿಗೆ ಆಗಮಿಸಿದ್ದು, ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ಯುವ ರೆಡ್ ಕ್ರಾಸ್ ಸಂಯೋಜಕಿ ಶಾಂತಾ ಅಷ್ಟಿಗೆ ಪ್ರಾಸ್ತಾವಿಕ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ, ಮುಖ್ಯ ಶಿಕ್ಷಕಿ ಸುಮಿತ್ರಾಬಾಯಿ, ಮುಖಂಡ ಮಹಾದೇವಪ್ಪ ಯರಬಾಗಿ, ಅರುಣಕುಮಾರ ಲೋಯಾ, ಶಾಬಾದಿ, ಭಾಗ್ಯಲಕ್ಷ್ಮೀ ಎಂ., ವೈದ್ಯಾಧಿಕಾರಿ ಸ್ಯಾಮುವೆಲï ಜಯಕುಮಾರ, ಡಾ.ರವೀಂದ್ರ ಕುಂಬಾರ, ನೀತಾ ಭೋಸ್ಲೆ, ಸವಿತಾ ಪಾಟೀಲ್, ಜ್ಯೋತಿ ಕಿರಣಗಿ, ಅವಿನಾಶ ಕಂಠಿಕರ ಇತರರಿದ್ದರು.

    ಡಾ.ಮಹ್ಮದ್ ಯೂನಿಸ್ ಸ್ವಾಗತಿಸಿದರು. ಡಾ.ರಮೇಶ ಪೋತೆ ವಂದಿಸಿದರು. ಓಕಳಿ ಸೇರಿ ಸುತ್ತಲಿನ ಗ್ರಾಮಗಳ ೩೦೦ ರೋಗಿಗಳ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts