More

    ಕಲ್ಪತರು: ಕೆರೆಯ ತಟದಿ ನಿಂತ ಕರುಣಾಮಯಿಗಳು

    ಕಲ್ಪತರು: ಕೆರೆಯ ತಟದಿ ನಿಂತ ಕರುಣಾಮಯಿಗಳುತಮಿಳುನಾಡಿನ ತಿರುನಲ್ವೇಲಿಯಲ್ಲಿ ಹರಿಯುವ ತಾಮ್ರಪರ್ಣೀ ನದಿಯ ತೀರದಲ್ಲಿ ಕುಳಿತು ಮುಖ್ಯಪ್ರಾಣದೇವರನ್ನು ಆರಾಧಿಸಿ ಆತನ ಕೃಪೆಗೆ ಪಾತ್ರರಾದವರೇ ತಾಮ್ರಪರ್ಣೀವಂಶಸ್ಥರು. ಅಂತಹ ವಂಶದಲ್ಲಿ ಬಂದವರೇ ವಿದ್ವಾನ್​ ತಾಮ್ರಪರ್ಣೀ ಸುದರ್ಶನಾಚಾರ್ಯರು. ಮೂಲತಃ ಮಂಡ್ಯದವರಾದ ಆಚಾರ್ಯರು ತಮ್ಮ ಎಳವೆಯಲ್ಲೆ ತಮಿಳುನಾಡಿನ ಪಾಪಾರಪಟ್ಟಿ ಎಂಬ ಗ್ರಾಮದಲ್ಲಿ ಪ್ರಕಾಂಡ ವಿದ್ವಾಂಸರಾಗಿದ್ದ ಕೊಯಮತ್ತೂರು ಸುಬ್ಬಾಚಾರ್ಯರಲ್ಲಿ ಶಿಷ್ಯತ್ವವಹಿಸಿದರು.

    ಕ್ರಿ.ಶ.1978ರಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿಗೆ ಮರಳಿದ ಆಚಾರ್ಯರು ಬೆಂಗಳೂರಿನ ದಣಭಾಗದಲ್ಲಿ ರಾಯರ ಸನ್ನಿಧಾನವನ್ನು ಸ್ಥಾಪಿಸಿ ಗುರುಭಕ್ತರಿಗೆ ನಿತ್ಯಸೇವೆಗೆ ಅನುಕೂಲಮಾಡಿಕೊಡುವ ಬಗ್ಗೆ ಆಲೋಚಿಸಿದರು.

    ಬಿಡಿಎ ನಿವೇಶನವನ್ನು ಕೋರಿ ಅರ್ಜಿ ಸಲ್ಲಿಸಿದರು. ಆದರೆ ಮಂಜೂರಾದ ನಿವೇಶನವು ಹತ್ತು ಅಡಿ ಎತ್ತರದ ಬಂಡೆಗಳಿಂದಲೂ ಇನ್ನುಳಿದ ಭಾಗ ಹತ್ತಾರು ಅಡಿ ಆಳದ ಕೆರೆಯಿಂದಲೂ ತುಂಬಿದ್ದ ಬೆಂಗಳೂರಿನ ಚನ್ನಮ್ಮನಕೆರೆಯ ಬಳಿಯಲ್ಲಿತ್ತು. ಇಷ್ಟಾದರೂ ರಾಯರ ತಾಣವನ್ನು ಕಟ್ಟಲೇಬೇಕೆಂಬ ಸೌಮ್ಯಹಠದಿಂದ ಆಚಾರ್ಯರು ಅಂದಿನ ಉತ್ತರಾದಿಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಸತ್ಯಪ್ರಮೋದತೀರ್ಥರ ಬಳಿಗೆ ತೆರಳಿ ಅವರೇ ಬಂದು ಆಶೀರ್ವದಿಸಬೇಕೆಂದು ಕೋರಿಕೊಂಡರು. ಗುರುಗಳು ಆಶೀರ್ವದಿಸಿದರು. ಅನೇಕ ಭಕ್ತಾದಿಗಳು ವಿವಿಧ ರೀತಿಯಿಂದ ಕೈ ಜೋಡಿಸಿದರು. ಶಂಕುಸ್ಥಾಪನಾ ಮಹೋತ್ಸವ, ವಿದ್ವಾನ್​ ಡಂಬಳಂ ಭೀಮಾಚಾರ್ಯರ ನೇತೃತ್ವದಲ್ಲಿ ಸಾಂಗೋಪಾಂಗವಾಗಿ ನೆರವೇರಿಸಲ್ಪಟ್ಟಿತು. ಸೇವಾಕರ್ತ ನೋರ್ವರಿಂದ ರಾಯರ ಬೃಂದಾವನದ ನಿರ್ಮಾಣಕಾರ್ಯ ನಿಯೋಜನೆಗೊಂಡು, ನಂತರ ಅದನ್ನು ಪಡೆಯಲು ಶಿಲ್ಪಿಯಲ್ಲಿಗೆ ತೆರಳಿದಾಗ ಶಿಲ್ಪಿಯು “ಸ್ವಾಮಿ ನಾವು ನಮ್ಮ ಮನೆಯಲ್ಲಿ ಸುಮ್ಮನೆ ಒಂದು ಲಿಂಗ ಇಟ್ಟಿದ್ದೆವು.

    ಪೂಜೆ ಪುನಸ್ಕಾರ ಏನೂ ಇರಲಿಲ್ಲ. ನಾವು ನಮಗಾಗಿ ಲಿಂಗವನ್ನು ಮಾಡಿ ಇಟ್ಟುಕೊಂಡಿದ್ದೆವು. ಆದರೆ ಇತ್ತೀಚೆಗೆ ನಮ್ಮ ಸ್ವಪ್ನದಲ್ಲಿ ಈಶ್ವರನೇ ಮತ್ತೆ ಮತ್ತೆ ಬಂದು ನಾನು ಇಲ್ಲಿರಲೊಲ್ಲೆ, ಈ ಬೃಂದಾವನದ ಜೊತೆಗೆ ನನ್ನನ್ನೂ ಕಳುಹಿಸಿಬಿಡು ಎನ್ನುತ್ತಿದ್ದಾನೆ. ಈ ಲಿಂಗವನ್ನು ನೀವೇ ತೆಗೆದುಕೊಂಡು ಹೋಗಿ, ಯಾವ ಹಣವೂ ನಮಗೆ ಬೇಕಿಲ್ಲ ಎಂದನು. ಇದನ್ನು ಕೇಳಿದ ಸುದರ್ಶನಾಚಾರ್ಯಾರು ಎಲ್ಲವೂ ಹರಿ ಇಚ್ಛೆ ಮಹರುದ್ರನು ತಾನೇ ಬರುತ್ತಿದ್ದಾನೆಂದು ಲಿಂಗವನ್ನು ಮನೆಗೆ ತಂದರು. ಉಡುಪಿಯಲ್ಲಿರುವ ರುದ್ರಾಂತರ್ಗತ ಪರಮಾತ್ಮನಿಗೆ ಅನಂತೇಶ್ವರನೆನ್ನುವ ಕಾರಣ, ಆತನ ಪರಮಭಕ್ತನಾದ ಮಹರುದ್ರನ ಈ ಲಿಂಗರೂಪಕ್ಕೂ ಅನಂತೇಶ್ವರ ಎಂದು ನಾಮಕರಣ ಮಾಡಿದರು. ಶ್ರೀಸತ್ಯಪ್ರಮೋದತೀರ್ಥರೂ ಸಮ್ಮತಿಸಿದ್ದರು. ಕ್ರಿ.ಶ.1989ರ ಆಷಾಢ ಶುದ್ಧ ದಶಮೀ ದಿವಸ ಉತ್ತರಾದಿ ಮಠಾಧೀಶರಾದ ಶ್ರೀಸತ್ಯಪ್ರಮೋದತೀರ್ಥರ ದಿವ್ಯಕರಕಮಲಗಳಿಂದ ಗುರುರಾಜರ ಬೃಂದಾವನ ಪ್ರತಿಷ್ಠಾಪನಾಕಾರ್ಯ ನೆರವೇರಿತು. ಬೆಂಗಳೂರಿನ ತ್ಯಾಗರಾಜನಗರ ಬಡಾವಣೆಯಲ್ಲಿ ರುದ್ರಾಂತರ್ಗತ ನರಸಿಂಹನನ್ನು ನೋಡುತ್ತಾ, ಆರಾಧಿಸುತ್ತಿರುವ ಗುರುರಾಯರ ಸನ್ನಿಧಾನವು ಒದಗಿಬಂದಿದೆ. ನಿತ್ಯವೂ ಹಸ್ತೋದಕಸೇವೆಯು ನಡೆದುಕೊಂಡು ಬರುತ್ತಿದೆ. ಶಿವರಾತ್ರಿ, ಕಾರ್ತೀಕ ಉತ್ಸವ, ಪ್ರಬೋಧ ಉತ್ಸವ, ಕಲ್ಯಾಣೋತ್ಸವ, ವಸಂತೋತ್ಸವಗಳಲ್ಲದೆ ಯತಿವರೇಣ್ಯರ ದಾಸರ, ಅಪರೋಾನಿಗಳ ಆರಾಧನೆಗಳೂ ವಿಜೃಂಭಣೆಯಿಂದ ನಡೆಯುತ್ತಿವೆ. ಇಂದು ರಾಯರ ಬೃಂದಾವನ ಪ್ರತಿಷ್ಠಾಪನೆಗೊಂಡಿರುವ ಸ್ಥಳವೂ ವಿಶೇಷವಾಗಿದೆ. ಇಲ್ಲಿ ಕೆರೆಯಿದ್ದಾಗ ಅನೇಕರು ಇದೇ ಸ್ಥಳದಲ್ಲೆ ಯಾರೋ ಒಬ್ಬ ಸಂನ್ಯಾಸಿಯು ನಿತ್ಯವೂ ತಮ್ಮ ಜಪ&ಆಹ್ನೀಕಾದಿಗಳನ್ನು ನೆರವೇರಿಸುತ್ತಿದ್ದುದನ್ನು ಕಂಡಿದ್ದಾರಂತೆ.

    ತಾಮ್ರಪರ್ಣೀವಂಶಸ್ಥರಿಗೆ ತಾಮ್ರಪರ್ಣೀನದಿಯಲ್ಲಿ ದೊರಕಿದ, ಒಲಿದುಬಂದ ಪ್ರಾಣದೇವರ ವಿಗ್ರಹವೂ ಈ ಮಠದಲ್ಲಿ ನಿತ್ಯವೂ ಪೂಜೆಗೊಳ್ಳುತ್ತಿದೆ. ಹಿಂದೊಮ್ಮೆ ಈ ವಂಶಜರು ತಾಮ್ರಪರ್ಣೀನದಿಯಲ್ಲಿ ಆಹ್ನೀಕವನ್ನು ಕೈಗೊಳ್ಳುತ್ತಿದ್ದಾಗ ಅರ್ಧ ಅಡಿ ಎತ್ತರದ ಎಡಕ್ಕೆ ತಿರುಗಿದ ಅಭಯಹಸ್ತನಾದ, ಎಡಗೈಯಲ್ಲಿ ಸೌಗಂಧಿಕಾಪುಷ್ಪವನ್ನು ಹಿಡಿದಿರುವ ಶಿಲೆಯ ಹನುಮನು ಸಿಕ್ಕಿದನು. ಆದರೆ ದೌರ್ಭಾಗ್ಯವಶಾತ್​ ಆ ಮೂತಿರ್ಯ ಬಾಲವು ತುಂಡಾಗಿತ್ತು. ಶಾಸದಲ್ಲಿ ಹೇಳಿದ ಮೂತಿರ್ಲಣಗಳಿಗೆ ಅನುಗುಣವಾಗಿ ಭಗ್ನವಾದ ಆ ಮೂತಿರ್ಯನ್ನು ಪೂಜಿಸುವಂತಿರಲಿಲ್ಲ. ಹೀಗೆ ಪೂಜೆ ಇಲ್ಲದೆ ಮೂತಿರ್ಯು ಆಚಾರ್ಯರ ಮನೆಯಲ್ಲಿ ಬಹಳಕಾಲ ಇತ್ತು. ಆ ಸ್ವಪ್ನದಲ್ಲಿ ಹನುಮಂತದೇವರೇ ಸೂಚಿಸಿದಂತೆ ಆ ವಂಶದವರು 48 ದಿವಸಗಳ ಕಾಲ ವಾಯುಸ್ತುತಿಯ ಪುನಶ್ಚರಣೆಯನ್ನು ಕೈಗೊಳ್ಳಲು ಕ್ರಮೇಣ ಹನುಮನಿಗೆ ಬಾಲವು ಬೆಳೆಯಲು ಆರಂಭಿಸಿತು. ಕೆಲವೇ ದಿನಗಳಲ್ಲಿ ಸುರುಳಿಸುತ್ತಿದ ಬಾಲವು ಸ್ಪಷ್ಟವಾಗಿ ಎಲ್ಲರಿಗೂ ಕಾಣುವಂತಾಗಲು ಅಂದಿನಿಂದ ನಿತ್ಯಪೂಜೆಯು ಆತನಿಗೆ ಪ್ರಾರಂಭವಾಯಿತು. ಇಂದು ಸುದರ್ಶನಾಚಾರ್ಯರು ತಮ್ಮ ಮಠದಲ್ಲಿ ರಾಯರ ಬೃಂದಾವನದ ಮೇಲಿಟ್ಟು ನಿತ್ಯವೂ ಅಚಿರ್ಸುತ್ತಾ ಭಕ್ತರ ಅಭೀಷ್ಟಗಳನ್ನು ನೆರವೇರಿಸುತ್ತಿರುವರು.

    ಹಿಂದೊಮ್ಮೆ ರಾಯರ ಅರ್ಚನೆಯಲ್ಲಿ ತೊಡಗಿದ್ದ ಆಚಾರ್ಯರೊಬ್ಬರು ಬೃಂದಾವನವನ್ನು ನಿತ್ಯವೂ ತೊಳೆಯುವಾಗ ಅವರಿಗೆ ಬೃಂದಾವನವನ್ನು ಸ್ಪಷಿರ್ಸುತ್ತಿದ್ದಂತೆಯೇ ಯಾವುದೋ ನೈಜ ಕೈಗಳನ್ನು ಸ್ಪಶಿರ್ಸಿದಂತಾಗುತ್ತಿತ್ತಂತೆ. ಇಂತಹ ರಾಯರ 350 ನೇ ಆರಾಧನೆಯ ಅವಬೃಥ ಳಿಗೆಯಲ್ಲಿದ್ದೇವೆ ನಾವಿಂದು. ಶ್ರೀಗುರುರಾಜೋ ವಿಜಯತೇ.

    (ಲೇಖಕರು ವಿದ್ವಾಂಸರು, ಸಂಸ್ಕೃತ ಪ್ರಾಧ್ಯಾಪಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts