More

  ಉತ್ಸವದ ವೇಳೆಯೇ ದೇವಸ್ಥಾನದ ರಥದಿಂದ ಕಳಚಿ ಬಿದ್ದ ಕಳಶ; ಭಕ್ತರಲ್ಲಿ ತೀವ್ರ ಆತಂಕ!

  ವಿಜಯನಗರ: ಎರಡು ವರ್ಷಗಳ ಬಳಿಕ ನಡೆದ ರಥೋತ್ಸವದಲ್ಲಿ ರಥದಿಂದ ಕಳಶ ಕಳಚಿ ಬಿದ್ದಿರುವುದು, ಭಕ್ತರಲ್ಲಿ ಆತಂಕ ಮೂಡಿಸಿದ್ದು, ಅವರನ್ನು ಚಿಂತೆಗೀಡು ಮಾಡಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ದೇವಸ್ಥಾನವೊಂದರಲ್ಲಿ ಈ ವಿದ್ಯಮಾನ ನಡೆದಿದೆ.

  ಹೊಸಪೇಟೆಯ ಸಣ್ಣಕ್ಕಿ ವೀರಭದ್ರೇಶ್ವರ ರಥೋತ್ಸವ ಕರೊನಾ ಕಾರಣದಿಂದಾಗಿ ಕಳೆದೆರಡು ವರ್ಷಗಳ ಕಾಲ ನಡೆದಿರಲಿಲ್ಲ. ಆದರೆ ಈ ಸಲ ಕರೊನಾ ಗಣನೀಯವಾಗಿ ಜನಜೀವನ ಸಹಜಸ್ಥಿತಿಗೆ ಮರಳಿದ ಹಿನ್ನೆಲೆಯಲ್ಲಿ ರಥೋತ್ಸವ ನಡೆಸಲಾಗಿದೆ. ಈ ಬಾರಿ ಹೊಸದಾಗಿ ತೇರು ನಿರ್ಮಾಣ ಮಾಡಿ, ಸಹಸ್ರಾರು ಮಂದಿಯ ಸಮ್ಮುಖದಲ್ಲಿ ಅದ್ಧೂರಿಯಾಗಿಯೇ ರಥೋತ್ಸವ ನಡೆಸಲಾಗಿದೆ.

  ಆದರೆ ಹೀಗೆ ನಡೆದ ರಥೋತ್ಸವದಲ್ಲಿ ತೇರು ಸುಮಾರು 50 ಮೀಟರ್ ದೂರದಷ್ಟು ಚಲಿಸುವಷ್ಟರಲ್ಲಿ ರಥದ ಕಳಶ ಕಳಚಿಕೊಂಡು ಬಿದ್ದಿದೆ. ಆ ಕಳಶವನ್ನು ಮತ್ತೆ ಕಟ್ಟಿದರೂ ಅದು ನಿಂತಿಲ್ಲ. ಪರಿಣಾಮವಾಗಿ ದೇವಳದ ಭಕ್ತರು ಕಳಶ ಕಳಚಿಕೊಂಡಿರುವುದು ಅಪಶಕುನವಾ ಎಂಬ ಆತಂಕಕ್ಕೆ ಒಳಗಾಗಿದ್ದು, ಚಿಂತೆಗೀಡಾಗಿದ್ದಾರೆ.

  ಪಬ್​ ಜಿ ಗೀಳು ತಂದಿಟ್ಟ ಫಜೀತಿ; ಬಾಂಬ್​ ಇದೆ ಎಂದು ಕರೆ ಮಾಡಿದ್ದ ಬಾಲಕ!

  ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆಗೆಸಿರಿ, ಇಲ್ಲದಿದ್ದರೆ..; ಸರ್ಕಾರಕ್ಕೆ ಸವಾಲೆಸೆದ ರಾಜ್​ ಠಾಕ್ರೆ

  ಒಂದೊಪ್ಪತ್ತಲ್ಲೇ ಭಾರಿ ವಿರೋಧಕ್ಕೆ ಮಣಿದ ಶ್ರೀಲಂಕಾ ಸರ್ಕಾರ; ಆಗಿದ್ದೇನು?

  See also  ರಾಚೋಟೇಶ್ವರ ಅಗ್ನಿ ಕುಂಡ ಹಾಯ್ದ ಭಕ್ತರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts