More

    ಕಳಸಾ ಬಂಡೂರಿ ಯೋಜನೆಗೆ ಅನುಮತಿ ನೀಡಿದ ಕೇಂದ್ರ ಜಲ ಆಯೋಗ..!

    ಬೆಂಗಳೂರು: ಅನೇಕ ವರ್ಷಗಳಿಂದ ಕಳಸಾ ಬಂಡೂರಿ ಯೋಜನೆಗಾಗಿ ರಾಜ್ಯದಲ್ಲಿ ಹೋರಾಟ ನಡೆಯುತ್ತಿತ್ತು. ಇದೀಗ ಆ ಹೋರಾಟದ ಫಲವಾಗಿ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗ ಸ್ವೀಕಾರ ಮಾಡಿದೆ.

    ‘ಇಂದು ಕೇಂದ್ರ ಜಲ ಆಯೋಗವು ಕರ್ನಾಟಕದ ಕಳಸಾ ಬಂಡೂರಿ ವಿಸ್ತೃತ ಯೋಜನಾ ವರದಿಯನ್ನು ಸ್ವೀಕಾರ ಮಾಡಿದ್ದು ಇನ್ನು ಸುಲಭವಾಗಿ ಯೋಜನೆಯ ಕಾಮಗಾರಿ ಶುರುವಾಗಲಿದೆ’ ಎಂದು ಸಂಸದೀಯ ವ್ಯವಹಾರಗಳ ಸಚಿವ, ಪ್ರಹ್ಲಾದ್​ ಜೋಶಿ ಹೇಳಿಕೆ ನೀಡಿದ್ದಾರೆ.

    ಇದೀಗ ಕಳಸಾ ಬಂಡೂರಿ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಜಲ ಆಯೋಗ ಸ್ವೀಕಾರ ಮಾಡಿದ್ದು ಇದು ಯೋಜನೆಗೆ ಗ್ರೀನ್​ ಸಿಗ್ನಲ್​ ಆಗಿದೆ. ಈ ಬಗ್ಗೆ ಸಚಿವ, ಪ್ರಹ್ಲಾದ್​ ಜೋಶಿ ಹೇಳಿಕೆ ನೀಡಿದ್ದು ‘ಕೇಂದ್ರ ಜಲ ಶಕ್ತಿ ಇಲಾಖೆಯ ಸಚಿವ, ಗಜೇಂದ್ರ ಸಿಂಗ್​ ಶೇಖಾವತ್​ ಈ ಯೋಜನೆಗೆ ಅನುಮತಿ ನೀಡಿದ್ದಾರೆ’ ಎಂದಿದ್ದಾರೆ.

    ಏನಿದು ಕಳಸಾ ಬಂಡೂರಿ ಯೋಜನೆ?
    ಈ ಯೋಜನೆಯ ಅಡಿಯಲ್ಲಿ ಮಹದಾಯಿ ಹಾಗೂ ಮಲಪ್ರಭಾ ನದಿಯನ್ನು ಜೋಡಿಸಿ ಕಳಸಾ ಬಂಡೂರಿ ನಾಲೆಯ ಮೂಲಕ ನೀರು ತಿರುಗಿಸುವುದು ರಾಜ್ಯ ಸರ್ಕಾರದ ಉದ್ದೇಶವಾಗಿತ್ತು. ಈ ಮೂಲಕ ಕಿತ್ತೂರು ಕರ್ನಾಟಕ, ಹುಬ್ಬಳ್ಳಿ-ಧಾರವಾಡ, ಬೆಳಗಾವವಿ, ಗದಗ, ನರಗುಂದ ಭಾಗಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಯೋಜನೆ ಕಳಸಾ ಬಂಡೂರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts