More

    ಜನಮನ ಸೂರೆಗೊಂಡ ಮಕ್ಕಳ ಪ್ರದರ್ಶನ

    ಕಕ್ಕೇರಾ: ಸ್ಥಳೀಯ ಸರ್ಕಾರಿ ಪ್ರೌಢಶಾಲೆ ಹಾಗೂ ವಲಯ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಂಡ ರಾಜ್ಯೋತ್ಸವದಲ್ಲಿ ಪ್ರೌಢಶಾಲಾ ಮಕ್ಕಳಿಂದ ಜರುಗಿದ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೂರೆಗೊಂಡವು.

    ಪ್ರೌಢಶಾಲೆ ಮಕ್ಕಳಿಂದ ಆಕರ್ಷಕ ಪಥ ಸಂಚಲನದ ಬೀದಿ ನಾಟಕದಲ್ಲಿ ಪ್ರಮುಖವಾಗಿ ಕಿತ್ತೂರು ರಾಣಿ ಚನ್ನಮ್ಮ ಪ್ರದರ್ಶನವು ಅದ್ದೂರಿಯಾಗಿ ಮೂಡಿಬಂತು. ನಾಡಿನ ಸಂರಕ್ಷಣೆ ಚನ್ನಮ್ಮ ವೇಷಧಾರಿ ವಿಜಯಲಕ್ಷ್ಮೀ ಪೂಜಾರಿ ಹಾಗೂ ಬ್ರಿಟಿಷ್ ಅಧಿಕಾರಿ ಥಾಕರೆ ಅಜಯಕುಮಾರ ಹಾಗೂ ಸಂಗೊಳ್ಳಿ ರಾಯಣ್ಣ ಪಾತ್ರಧಾರಿ ಆಪ್ರೋಜ್ ನಡುವೆ ನಡೆದ ಸಂಭಾಷಣೆ ನೆರೆದ ಜನಸ್ತೋಮವನ್ನು ರೋಮಾಂಚನಗೊಳಿಸಿದರು.

    ಓಬವ್ವ ಪಾತ್ರದಲ್ಲಿ ನಿಂಗಮ್ಮ ಗುಮೇದಾರ ಕನ್ನಡ ನಾಡಿನ ಸಂಪತ್ತನ್ನು ದೋಚಲು ಅನ್ಯಮಾರ್ಗದಲ್ಲಿ ಕೋಟೆಯೊಳಗೆ ಪ್ರವೇಶಿಸುವ ಎದುರಾಳಿಗಳನ್ನು ಒನಕೆಯಿಂದ ಹೊಡೆದುರುಳಿಸಿ ತಾನೂ ಪ್ರಾಣತ್ಯಾಗ ಮಾಡುವ ಸನ್ನಿವೇಶ ನೆರೆದ ಜನಸಮೂಹ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಪಿರಮಿಡ್‌ನಂತಹ ಸಾಹಸಮಯ ಪ್ರದರ್ಶನ ಮತ್ತು ಶಾಲಾ ಮಕ್ಕಳಿಂದ ಹಾಗೂ ಶಿಕ್ಷಕ ಬಸಯ್ಯಸ್ವಾಮಿ ಅವರ ಸಿರಿಕಂಠದಿಂದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಸೇರಿ ಹಲವು ಪ್ರಮುಖ ಕನ್ನಡ ಗೀತೆಗಳು ಮೊಳಗಿದವು.

    ಎಸ್‌ಡಿಎಂಸಿ ಅಧ್ಯಕ್ಷ ದೇವಿಂದ್ರಪ್ಪ ದೇಸಾಯಿ, ಶಾಲಾ ಮುಖ್ಯಶಿಕ್ಷಕ ಸಂಗನಗೌಡ ದೇವರಡ್ಡಿ, ಸಹ ಶಿಕ್ಷಕರಾದ ಬಸಯ್ಯಸ್ವಾಮಿ, ಲಕ್ಷ್ಮೀಬಾಯಿ, ರಾಜಭಕ್ಷಿ, ದೇವಿಂದ್ರಪ್ಪ ಆಲದಾರ್ತಿ, ಸುನೀಲ ಹಡಪದ, ರಾಜು ಬೊಮ್ಮನಳ್ಳಿ, ಮಹಾದೇವಿ ಅರಳಳ್ಳಿ, ಅಶ್ವಿನಿ, ಸೋಮಶೇಖರ ಗುರಿಕಾರ, ಹರಿಪ್ರಸಾದ, ಗಣೇಶ, ಕಸಾಪ ವಲಯ ಅಧ್ಯಕ್ಷ ಕೆ.ಗವಿಸಿದ್ದೇಶ ಹೊಗರಿ, ಪದಾಧಿಕಾರಿಗಳಾದ ಹೊನ್ನಪ್ಪ ಹಾದಿಮನಿ, ನಂದಣ್ಣ ವಾರಿ, ಆದಯ್ಯಸ್ವಾಮಿ, ರಾಘು ಮುದನೂರ, ಬಾಲು, ಪ್ರವೀಣ ಜಕಾತಿ, ಮುತ್ತು ಶಿವಪೂಜಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts