More

    ಜಾನಪದ ಕಲೆ ಮಾನವೀಯ ಮೌಲ್ಯ ಒತ್ತಿ ಹೇಳುತ್ತೆ; ಅರುಣಕುಮಾರ ಪೂಜಾರ

    ರಾಣೆಬೆನ್ನೂರ: ಇಂದಿನ ಯುವ ಜನತೆ ಯಾಂತ್ರಿಕ ಜೀವನ ಶೈಲಿ ಬದಿಗಿಟ್ಟು, ಜಾನಪದ ಶೈಲಿಯ ಬದುಕನ್ನು ಕಟ್ಟಿಕೊಳ್ಳಬೇಕು. ಜಾನಪದ ಕಲೆ ಜಾಗತೀಕರಣವಾಗಿದ್ದು, ಮಾನವೀಯ ಮೌಲ್ಯಗಳನ್ನ ಒತ್ತಿ ಹೇಳುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಹೇಳಿದರು.
    ನಗರದ ಯರೇಕುಪ್ಪಿ ರಸ್ತೆಯ ನೀಲಕಂಠೇಶ್ವರ ದೇವಸ್ಥಾನ ಆವರಣದ ಗಣೇಶೋತ್ಸವ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸೌರಭ ಜಾನಪದ ಕಲಾವೇದಿಕೆ ಮತ್ತು ಕಾಕಿ ಜನಸೇವಾ ಸಂಸ್ಥೆ ಸಹಯೋಗದಲ್ಲಿ ದಿ. ದೊಡ್ಡನಾಗಪ್ಪ ತಿರಕಪ್ಪ ಕಾಕಿ ಹಾಗೂ ದಿ.ಸಣ್ಣನಾಗಪ್ಪ ತಿರಕಪ್ಪ ಕಾಕಿ ಪುಣ್ಯ ಸ್ಮರಣೋತ್ಸವದ ಪ್ರಯುಕ್ತ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಜಾನಪದ ಉತ್ಸವ ಹಾಗೂ ಜೇಸಿವಾಣಿ ಅರಮನೆ ಭೂಮಿ ಪೂಜಾ ಸಮಾರಂಭ, ಬೃಹತ್ ರಕ್ತದಾನ ಶಿಬಿರ ಮತ್ತು ದೇಹ ದಾನ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಇಂದಿನ ಗ್ರಾಮೀಣ ಕಲೆಗಳು ಜನರ ಉಸಿರಾಗಬೇಕು. ಈ ಜಾನಪದ ಉತ್ಸವ ಮೆರಗಾಗಿದೆ. ನಮ್ಮ ಸಂಸ್ಕೃತಿ ಪರಂಪರೆ ಉಳಿಸಬೇಕಾದರೆ ಸಂಘ ಸಂಸ್ಥೆಗಳು ಮುಂದಾಗಬೇಕು. ಇಂದಿನ ಸ್ವಾರ್ಥ ಪ್ರಪಂಚದಲ್ಲಿ ಸಮಾಜ ಸೇವೆಗೆ ತಮ್ಮ ತಾವು ತೊಡಗಿಸಿಕೊಂಡಿರುವ ಕಾಕಿ ಕುಟುಂಬ ರಾಜ್ಯದಲ್ಲಿ ಪ್ರಥಮರಾಗಿದ್ದಾರೆ ಎಂದರು.
    ಕಾಕಿ ಜನಸೇವಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ ಕಾಕಿ ಅಧ್ಯಕ್ಷತೆ ವಹಿಸಿದ್ದರು. ಸುಗಮ ಸಂಗೀತ, ಜನಪದ ಸಂಗೀತ, ಲಂಭಾಣಿ ನೃತ್ಯ, ಜೋಗತಿ ನೃತ್ಯ, ಭರತನಾಟ್ಯ, ಜನಪದ ಸಮೂಹ ನೃತ್ಯಗಳ ತಂಡಗಳು ಉತ್ಸವದಲ್ಲಿ ಭಾಗವಹಿಸಿ ನೋಡುಗರ ಆಕರ್ಷಣೆ ಕೇಂದ್ರವಾಗಿತ್ತು.
    ಕುರುಹಿನಶೆಟ್ಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಉಪಾಧ್ಯಕ್ಷ ಶಿವಾನಂದ ಸಾಲಗೇರಿ, ಮುಖಂಡರಾದ ಹನುಮಂತಪ್ಪ ಕಾಕಿ, ಕೆ.ಸಿ. ನಾಗರಜ್ಜಿ, ಸಣ್ಣಹನುಮಂತಪ್ಪ ಕಾಕಿ, ರೂಪಾ ಕಾಕಿ, ವೆಂಕಟೇಶ ಕಾಕಿ, ಪ್ರಭುಲಿಂಗಪ್ಪ ಹಲಗೇರಿ, ಕಲಾವಿದರಾದ ಪರಶುರಾಮ ಬಣಕಾರ, ಗಂಗಮ್ಮ ಮೋಟೆಬೆನ್ನೂರು ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts