More

    ಹೊಸ ಸಿನಿಮಾದಲ್ಲಿ ಕಾಜಲ್-ಪ್ರಭುದೇವ ಜೋಡಿ

    ಗೌತಮ್ ಕಿಚ್ಲು ಜತೆಗೆ ಮದುವೆಯಾದ ನಂತರ ಕಾಜಲ್ ಅಗರ್​ವಾಲ್ ಯಾವೊಂದು ಹೊಸ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಈಗ ಅವರು ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿರುವ ಸುದ್ದಿ ಬಂದಿದೆ. ಈ ಬಾರಿ ಕಾಜಲ್ ನಟ-ನಿರ್ದೇಶಕ ಪ್ರಭುದೇವ ಅವರ ಜತೆಗೆ ನಟಿಸುತ್ತಿದ್ದಾರೆ ಎಂದು ಹೇಳಲಾಗಿದ್ದು, ಈ ಹಿಂದೆ ‘ಗುಲೇಬಕಾವಲಿ’ ಚಿತ್ರವನ್ನು ನಿರ್ದೇಶಿಸಿದ್ದ ಕಲ್ಯಾಣ್, ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರಂತೆ. ಕೆಲವು ದಿನಗಳ ಹಿಂದೆಯೇ ಒಂದು ಹಾರರ್ ಚಿತ್ರದಲ್ಲಿ ಪ್ರಭುದೇವ ಮತ್ತು ಕಾಜಲ್ ಜತೆಯಾಗಿ ನಟಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಆ ಚಿತ್ರ ಕಾರಣಾಂತರಗಳಿಂದ ಸೆಟ್ಟೇರಲಿಲ್ಲ.

    ಈಗ ಹಾರರ್ ಬದಲು ಒಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ಪ್ರಭುದೇವ ಮತ್ತು ಕಾಜಲ್ ಜತೆಯಾಗುತ್ತಿರುವುದು ವಿಶೇಷ. ಸದ್ಯ ಚಿರಂಜೀವಿ ಅಭಿನಯದ ‘ಆಚಾರ್ಯ’ ಚಿತ್ರದಲ್ಲಿ ಕಾಜಲ್ ಬಿಜಿಯಾಗಿದ್ದಾರೆ. ಈಗಾಗಲೇ ಒಪ್ಪಿರುವ ಕೆಲಸವನ್ನು ಮುಗಿಸಿ, ಆ ನಂತರವಷ್ಟೇ ಪ್ರಭುದೇವ ಅವರ ಜತೆಗೆ ಹೊಸ ಚಿತ್ರದಲ್ಲಿ ನಟಿಸಲಿದ್ದಾರಂತೆ. (ಏಜೆನ್ಸೀಸ್)

    PHOTO GALLERY| ಕಡಲ ಕಿನಾರೆಯಲ್ಲಿ ‘ಮುಗಿಲ್​ಪೇಟೆ’ ನಾಯಕಿಯ ವೈಯ್ಯಾರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts