More

    ವಿಡಿಯೋದಲ್ಲಿ ಬೇಬಿ ಬಂಪ್ ತೋರಿಸಿದ ಕಾಜಲ್! ಶುಭ ಹಾರೈಸಿದ ಅಭಿಮಾನಿಗಳು…

    ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಮತ್ತು ಅವರ ಪತಿ ಗೌತಮ್ ಕಿಚ್ಲು ಶೀಘ್ರದಲ್ಲೇ ತಮ್ಮ ಕುಟುಂಬಕ್ಕೆ ಅವರ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ. ಇನ್ನು, ಶನಿವಾರ, ನಟಿ ಕಾಜಲ್ ಅವರ ಇನ್​ಸ್ಟಾಗ್ರಾಂನಲ್ಲಿ ಒಂದು ಹೊಸ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈಗ, ಇದೇ ವಿಡಿಯೋಗೆ 6 ಲಕ್ಷಕ್ಕೂ ಹೆಚ್ಚು ಲೈಕ್ಸ್ ಇದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಾ, ನಟಿಯ ಅಭಿಮಾನಿಗಳಿಗೆ ಸಂತಸ ತಂದಿದೆ.
    ಈ ವಿಡಿಯೋದಲ್ಲಿ ಕಾಜಲ್ ಅವರ ಬೇಬಿ ಬಂಪ್‌ ಅನ್ನು ಒಂದು ಪಿಂಕ್ ಚಿಕ್ಕ ಗೌನ್​ನಂತಾ ಉಡುಪಿನಲ್ಲಿ ಅಭಿಮಾನಿಗಳಿಗೆ ತೋರಿಸಿಕೊಂಡಿದ್ದಾರೆ. ವಿಡಿಯೋದಲ್ಲಿ, ನಟಿ ತುಂಬು ಹೃದಯದಿಂದ ಖುಷಿಯಾಗಿರುವುದು ಮತ್ತು ಅವರ ಸಂತೋಷದ ಸಮಯವನ್ನು ಡ್ಯಾನ್ಸ್ ಮಾಡಿ ಎಂಜಾಯ್ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋಗೆ ನಟಿ ರೂಲ್ ಯುವರ್ ಕ್ವೀನ್​ಡಮ್. ಜೀವನದಲ್ಲಿ ಏನ್ನನಾದರೂ ಸಾಧಿಸಬಹುದು”, ಎಂಬ ಕ್ಯಾಪ್ಷನ್ ನೀಡಿದ್ದಾರೆ.
    ಕಾಜಲ್, ಗೌತಮ್ ಕಿಚ್ಲು ದಂಪತಿ ಜನವರಿ ತಿಂಗಳಲ್ಲಿ ಈ ಸಂತೋಷ ಸುದ್ದಿಯನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇನ್ನು, ಈ ವಿಡಿಯೋಗೆ ಮುನ್ನ, ನಟಿ ಕಾಜಲ್ ಕೆಂಪು ಸೀರೆ ಧರಿಸಿ ಮಾಡಿಸಿರುವ ಒಂದು ಬೇಬಿ ಬಂಪ್ ಫೋಟೋಶೂಟ್​ನ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದು, ಅವು ಕೂಡಾ ಈ ವಿಡಿಯೋ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ನಟಿಯ ಫೋಟೋಗಳು ಮತ್ತು ಈ ವಿಡಿಯೋ ಕೆಳಗೆ ಕಾಮೆಂಟ್ ವಿಭಾಗದಲ್ಲಿ ಅಭಿಮಾನಿಗಳು ಅವರ ಉತ್ತಮ ಆರೋಗ್ಯಕ್ಕೆ ಶುಭ ಹಾರೈಸಿದ್ದಾರೆ. 
    ನಟಿ ಕಾಜಲ್ ಮುಂಬರುವ ಚಿತ್ರ ಹೇ ಸಿನಾಮಿಕಾ!’ ನಲ್ಲಿ ಕಾಣಿಸಿಕೊಳ್ಳಲಿದ್ದು, ನಟ ದುಲ್ಕರ್ ಸಲ್ಮಾನ್ ಮತ್ತು ನಟಿ ಅದಿತಿ ರಾವ್ ಹೈದರಿ ಈ ಸಿನಿಮಾದಲ್ಲಿ ಬೇರೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ನಟ ಮೆಗಾ ಸ್ಟಾರ್ ಚಿರಂಜೀವಿ ಜತೆಗೆ ಕಾಜಲ್ ಅವರು ನಟಿಸಿರುವ ಆಚಾರ್ಯಸಿನಿಮಾ ಕೂಡಾ ರಿಲೀಸ್​ಗೆ ರೆಡಿಯಾಗುತ್ತಿದೆ

    ವಿಡಿಯೋದಲ್ಲಿ ಬೇಬಿ ಬಂಪ್ ತೋರಿಸಿದ ಕಾಜಲ್! ಶುಭ ಹಾರೈಸಿದ ಅಭಿಮಾನಿಗಳು... ವಿಡಿಯೋದಲ್ಲಿ ಬೇಬಿ ಬಂಪ್ ತೋರಿಸಿದ ಕಾಜಲ್! ಶುಭ ಹಾರೈಸಿದ ಅಭಿಮಾನಿಗಳು... ವಿಡಿಯೋದಲ್ಲಿ ಬೇಬಿ ಬಂಪ್ ತೋರಿಸಿದ ಕಾಜಲ್! ಶುಭ ಹಾರೈಸಿದ ಅಭಿಮಾನಿಗಳು... ವಿಡಿಯೋದಲ್ಲಿ ಬೇಬಿ ಬಂಪ್ ತೋರಿಸಿದ ಕಾಜಲ್! ಶುಭ ಹಾರೈಸಿದ ಅಭಿಮಾನಿಗಳು...

    ‘ಭೀಮ್ಲಾ ನಾಯಕ್’ ಅಬ್ಬರ ತಡೆಯಲು ದಿನವೊಂದಕ್ಕೆ 3 ಕೋಟಿ ರೂ. ಖರ್ಚು ಮಾಡುತ್ತಿರುವ ಜಗನ್?

    ಆತ್ಮಹತ್ಯೆ ಯೋಚನೆಗಳಿಂದಲೇ ನಟ ಸಲ್ಮಾನ್ ಖಾನ್ ಮದುವೆಯಾಗಲಿಲ್ಲವೇ?

    ನಾಗ ಚೈತನ್ಯ ಮೊದಲ ಭೇಟಿಯ ಗಳಿಗೆ ನೆನಪಿಸಿಕೊಂಡ ಸಮಂತಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts