More

    ಡಾ.ಕೆ.ವಿ.ರೇಣುಕಾಪ್ರಸಾದ್ ಭರ್ಜರಿ ಗೆಲುವು; ಒಕ್ಕಲಿಗರ ಸಂಘದ ಚುನಾವಣೆಯಲ್ಲಿ 1568 ಮತಗಳ ಮುನ್ನಡೆ

    ಸುಳ್ಯ: ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ದ.ಕ. ಮತಕ್ಷೇತ್ರದಿಂದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ.ರೇಣುಕಾ ಪ್ರಸಾದ್ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ, ಸಹೋದರ ಡಾ.ಕೆ.ವಿ.ಚಿದಾನಂದರವರನ್ನು 1568 ಮತಗಳಿಂದ ಸೋಲಿಸಿದ್ದಾರೆ.

    ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳನ್ನೊಳಗೊಂಡ ಮತಕ್ಷೇತ್ರ ಇದಾಗಿದ್ದು, ಭಾನುವಾರ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆದಿತ್ತು. ಡಾ.ಕೆ.ವಿ.ಚಿದಾನಂದ, ಡಾ.ಕೆ.ವಿ.ರೇಣುಕಾಪ್ರಸಾದ್ ಹಾಗೂ ಹೇಮಾನಂದ ಹಲ್ದಡ್ಕ ಕಣದಲ್ಲಿದ್ದರು. ಬುಧವಾರ ಮತ ಎಣಿಕೆ ನಡೆದಿದ್ದು, ಡಾ.ಕೆ.ವಿ.ರೇಣುಕಾಪ್ರಸಾದ್ 3309, ಡಾ.ಕೆ.ವಿ.ಚಿದಾನಂದ 1741, ಹೇಮಾನಂದ ಹಲ್ದಡ್ಕ 346 ಮತಗಳನ್ನು ಪಡೆದರು. 30 ಮತಗಳು ಅಸಿಂಧುವಾಗಿದೆ.

    ಉಡುಪಿಯಲ್ಲಿ ಡಾ.ಕೆ.ವಿ.ಚಿದಾನಂದರಿಗೆ 93, ಡಾ.ಕೆ.ವಿ.ರೇಣುಕಾ ಪ್ರಸಾದ್‌ಗೆ 3, ಹೇಮಾನಂದ ಹಲ್ದಡ್ಕರವರಿಗೆ 37, ಮಂಗಳೂರಿನಲ್ಲಿ ಡಾ.ಕೆ.ವಿ.ಚಿದಾನಂದರಿಗೆ 44, ಡಾ.ಕೆ.ವಿ.ರೇಣುಕಾ ಪ್ರಸಾದ್‌ಗೆ 192, ಪುತ್ತೂರಿನಲ್ಲಿ ಡಾ.ಕೆ.ವಿ.ಚಿದಾನಂದರಿಗೆ 138, ಡಾ.ಕೆ.ವಿ.ರೇಣುಕಾ ಪ್ರಸಾದ್‌ಗೆ 335, ಕಡಬದಲ್ಲಿ ಡಾ.ಕೆ.ವಿ.ಚಿದಾನಂದರಿಗೆ 52, ಡಾ.ಕೆ.ವಿ.ರೇಣುಕಾ ಪ್ರಸಾದ್‌ಗೆ 135 ಮತಗಳು ಲಭಿಸಿವೆ.

    ಚುನಾವಣೆಯಲ್ಲಿ ನ್ಯಾಯ ಬದ್ಧವಾಗಿ ಆಯ್ಕೆಯಾಗಿದ್ದೇನೆ. ಒಕ್ಕಲಿಗರ ಸಂಘದ ಪರಿಮಿತಿಯಲ್ಲಿ ಏನೆಲ್ಲ ಸೇವೆ ಮಾಡಲು ಸಾಧ್ಯವೋ ಅದನೆಲ್ಲ ಮಾಡಲು ಸಾಧ್ಯವಾಗಿದೆ. ಕಳೆದ ಮೂರು ಅವಧಿಗಳಲ್ಲಿ ನಾನು ಮಾಡಿದ ಕೆಲಸಗಳನ್ನು ಜನ, ಮತದಾರರು ಅರ್ಥ ಮಾಡಿಕೊಂಡಿದ್ದಾರೆ ಎಂಬುದು ಈ ಫಲಿತಾಂಶದಿಂದ ತಿಳಿಯುತ್ತದೆ. ಅದನ್ನು ಒಪ್ಪಿ ಜನ ನಾಲ್ಕನೇ ಬಾರಿಗೆ ಆಯ್ಕೆ ಮಾಡಿದ್ದಾರೆ.
    – ಡಾ.ಕೆ.ವಿ.ರೇಣುಕಾಪ್ರಸಾದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts