More

    ಮಾಜಿ ಶಾಸಕ ವೆಂಕಟಶಿವಾರೆಡ್ಡಿ ವಿರುದ್ಧ ಮಾನಹಾನಿ ಮೊಕದ್ದಮೆ ದಾಖಲಿಸಿದ ಮಾಜಿ ಸ್ಪೀಕರ್

    ಶ್ರೀನಿವಾಸಪುರ: ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಬೆಂಗಳೂರಿನ ವಿಧಾನಸೌಧದಲ್ಲಿ ಮಾಡಿರುವ ಆರೋಪದಿಂದ ವೈಯಕ್ತಿಕ ಹಾಗೂ ರಾಜಕೀಯ ಬದುಕಿಗೆ ಧಕ್ಕೆ ಉಂಟಾಗಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಗುರುವಾರ ಶ್ರೀನಿವಾಸಪುರ ನ್ಯಾಯಾಲಯಕ್ಕೆ ದೂರು ನೀಡಿದರು.

    ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನ ಹಿರಿಯ ವಕೀಲ ಶಂಕರಪ್ಪ ನನ್ನ ಹಿತೈಷಿಗಳು, ಈ ಹಿಂದೆ ನನ್ನ ಪರ ಕೆಲವೊಂದು ವಿಚಾರಗಳಲ್ಲಿ ಬೆಂಬಲಕ್ಕೆ ನಿಂತಿದ್ದಾರೆ. ಮತ್ತೊಬ್ಬ ವಕೀಲ ಶ್ಯಾಮ್ ನನ್ನ ಮಗನಿದ್ದಂತೆ. ಅವರೂ ನನ್ನ ಹಿತೈಷಿ. ಈ ಇಬ್ಬರೂ ಸೇರಿ ನಿಮ್ಮ ನೋವನ್ನು ನಾವು ಹಂಚಿಕೊಳ್ಳಲು ಸಿದ್ಧವಿದ್ದೇವೆ ಎಂದು ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದಾರೆ. ಕೇಸಿನ ಬಗ್ಗೆ ಅವರನ್ನೇ ವಿಚಾರಿಸಿ ಮಾಹಿತಿ ಪಡೆಯಿರಿ ಎಂದರು.

    ವಕೀಲ ಶಂಕರಪ್ಪ ಮಾತನಾಡಿ, ರಮೇಶ್ ಕುಮಾರ್ ಪ್ರಾಮಾಣಿಕ ರಾಜಕಾರಣಿ. ಇಂಥವರ ವಿರುದ್ಧ ಯಾವುದೋ ರಾಜಕೀಯ ಕಾರಣಗಳಿಗಾಗಿ ಜಿ.ಕೆ.ವೆಂಕಟಶಿವಾರೆಡ್ಡಿ ಮಾಧ್ಯಮದವರಿಗೆ ಸುಳ್ಳು ಸಾಕ್ಷಿ ಮತ್ತು ಸುಳ್ಳು ಮಾಹಿತಿ ಕೊಟ್ಟು ತೇಜೋವಧೆ ಮಾಡಿದ್ದಾರೆ ಎಂದರು.

    ವೆಂಕಟಶಿವಾರೆಡ್ಡಿ ಮಾಡಿರುವ ಆರೋಪದ ವಾದವನ್ನು ನ್ಯಾಯಾಲಯದ ಎದುರು ಮಂಡಿಸಲಾಗಿದೆ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಸುಳ್ಳು ಮಾಹಿತಿ ಕೊಟ್ಟವರಿಗೆ ಶಿಕ್ಷೆ ನೀಡಬೇಕು ಎಂದು ದೂರಿನಲ್ಲಿ ತಿಳಿಸಿರುವುದಾಗಿ ಹೇಳಿದರು.

    ಘಟನೆ ಹಿನ್ನೆಲೆ: ಶ್ರೀನಿವಾಸಪುರ ತಾಲೂಕು ಹೊಸ ಹುಡ್ಯ ಗ್ರಾಮದ ಸರ್ವೇ ನಂಬರ್ 1ರಲ್ಲಿ 315. 32 ಎಕರೆ ಇದ್ದು, ಅದರಲ್ಲಿ 9 ಎಕರೆ ಜಮೀನು, ಸರ್ವೇ ನಂಬರ್ 2 ರಲ್ಲಿ 52 ಎಕರೆ ಜಮೀನನ್ನು ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪವಿದ್ದು ತನಿಖೆ ನಡೆದರೆ ಸತ್ಯ ಹೊರಬೀಳಲಿದೆ ಎಂದು ಇತ್ತೀಚೆಗೆ ಬೆಂಗಳೂರಿನಲ್ಲಿ ಮಾಧ್ಯಮದವರಿಗೆ ವೆಂಕಟಶಿವಾರೆಡ್ಡಿ ಹೇಳಿಕೆ ನೀಡಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts