More

    ಸಾಮೂಹಿಕ ಪ್ರಾರ್ಥನೆ: ಕ್ಷಮೆಯಾಚನೆ ಪತ್ರ ಬರೆದುಕೊಟ್ಟ ಧರ್ಮಗುರು

    ಕೆ.ಆರ್.ಪೇಟೆ: ಪಟ್ಟಣದ ಮನೆಯೊಂದರಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದ ಧರ್ಮಗುರುವೊಬ್ಬರು ಕೊನೆಗೆ ತಹಸೀಲ್ದಾರ್‌ಗೆ ಕ್ಷಮೆ ಯಾಚಿಸಿ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ. ಪಟ್ಟಣದ ತಾಲೂಕು ಕಚೇರಿ ರಸ್ತೆಯಲ್ಲಿರುವ ರೇಡಿಯೋ ಅಕ್ಬರ್ ಮನೆಯಲ್ಲಿ ಬಾಡಿಗೆಗಿರುವ ಕೆ.ಆರ್. ನಗರ ತಾಲೂಕಿನ ಭೇರ್ಯ ಗ್ರಾಮದ ಶಫಿ ಎಂಬುವರು ಹಾಸನ ಮೂಲದ ಧರ್ಮಗುರು ಮಹಮದ್ ರಫೀಕ್ ನೇತೃತ್ವದಲ್ಲಿ ಶುಕ್ರವಾರ ಸಾಮೂಹಿಕ ಪ್ರಾರ್ಥನೆ ಏರ್ಪಡಿಸಿದ್ದರು.

    ಇದನ್ನೂ ಓದಿ: ಛತ್ತೀಸ್​ಗಢ ಮಾಜಿ ಸಿಎಂ ಅಜಿತ್​ ಜೋಗಿಗೆ ಕಾರ್ಡಿಯಾಕ್ ಅರೆಸ್ಟ್​

    ಹೊರ ಜಿಲ್ಲೆಗಳ 20ಕ್ಕೂ ಹೆಚ್ಚು ಸಂಬಂಧಿಕರು ಬಂದು ಇದರಲ್ಲಿ ಪಾಲ್ಗೊಂಡಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ವಿಷಯ ತಿಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.  ಸ್ಥಳಕ್ಕೆ ಬಂದ ಪೊಲೀಸರು ಶಫಿ ಅವರನ್ನು ವಿಚಾರಿಸಿದಾಗ ಮನೆಯಲ್ಲಿ ಪೂಜೆ ಇದ್ದುದರಿಂದ ಸಂಬಂಧಿಕರನ್ನು ಕರೆಸಿ, ಊಟ ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದರು. ಲಾಕ್‌ಡೌನ್ ಇರುವುದರಿಂದ ಜನರನ್ನು ಸೇರಿಸಿ ಪೂಜೆ ಮಾಡುವಂತಿಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದರು. ಆಗ ಹೊರಗಿನಿಂದ ಬಂದಿದ್ದ ಸಂಬಂಧಿಕರಲ್ಲಿ ಕೆಲವರು ಹಿಂದಿರುಗಿದರು. ಕೆಲವರು ಊಟ ಮಾಡಿಕೊಂಡು ಹೋದರು.

    ಇದನ್ನೂ ಓದಿ: ಕಾಂಗ್ರೆಸ್ಸಿಗರಿಗೆ ಶಾಕ್ ನೀಡಿದ ಜಾರಿ ನಿರ್ದೇಶನಾಲಯ!

    ಆದರೆ ಧರ್ಮಗುರುವನ್ನು ಮಾತ್ರ ಸಾರ್ವಜನಿಕರು ಸುಮ್ಮನೆ ಹೋಗಲು ಬಿಡಲಿಲ್ಲ. ದೇಶಾದ್ಯಂತ ಲಾಕ್‌ಡೌನ್ ಇರುವಾಗ ಸಾಮೂಹಿಕ ಪ್ರಾರ್ಥನೆ ಮಾಡಲು ಅವಕಾಶ ನೀಡಿದ್ದು ಎಷ್ಟು ಸರಿ? ದೇಶವೇ ಆತಂಕದಲ್ಲಿರುವಾಗ ಧರ್ಮಗುರು ಪ್ರಾರ್ಥನೆ ಮಾಡಲು ಯಾಕೆ ಬರಬೇಕು? ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಪಟ್ಟು ಹಿಡಿದರು.  ಬಳಿಕ ಸ್ಥಳಕ್ಕೆ ಬಂದ ತಹಸೀಲ್ದಾರ್ ಎಂ. ಶಿವಮೂರ್ತಿ ವಿಚಾರಣೆ ನಡೆಸಿ, ಸಾರ್ವಜನಿಕರ ಮನವೊಲಿಸಿ ಧರ್ಮಗುರುವಿಗೆ ಎಚ್ಚರಿಕೆ ನೀಡಿ ಕ್ಷಮಾಪಣೆ ಪತ್ರ ಬರೆಸಿಕೊಂಡು ತಾಲೂಕಿಗೆ ಬರದಂತೆ ತಾಕೀತು ಮಾಡಿ ಕಳುಹಿಸಿದರು.

    ಇದನ್ನೂ ಓದಿ: ಮೇ 17ರ ಬಳಿಕ ಪದವಿ ಪರೀಕ್ಷೆ ಕುರಿತು ನಿರ್ಧಾರ: ಸುಳಿವು ನೀಡಿದ್ರು ಡಿಸಿಎಂ

    ಇದೇ ಧರ್ಮಗುರು ಅಕ್ಕಿಹೆಬ್ಬಾಳು ಹೋಬಳಿಯ ಗ್ರಾಮವೊಂದರಲ್ಲಿ ಕೆಲ ದಿನಗಳ ಹಿಂದೆ ಲಾಕ್‌ಡೌನ್ ನಡುವೆಯೂ ಸಾಮೂಹಿಕ ಪ್ರಾರ್ಥನೆ ಏರ್ಪಡಿಸಿದ್ದು, ಅಲ್ಲಿನ ಜನ ಪ್ರಾರ್ಥನೆ ಮಾಡದಂತೆ ತಡೆದು ಕಳುಹಿಸಿದ್ದರು ಎಂಬ ಮಾಹಿತಿ ಸಿಕ್ಕಿದೆ.

    ಪಿಯುಸಿವರೆಗಿನ ಪಾಠ ಇನ್ಮುಂದೆ ಮನೆಯಲ್ಲಿಯೇ ಉಚಿತವಾಗಿ ಕಲಿಯಬಹುದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts