More

    ಅರ್ಕೇಶ್ವರ ಸ್ವಾಮಿ ತೆಪ್ಪೋತ್ಸವ

    ಕೆ.ಆರ್.ನಗರ: ತಾಲೂಕಿನ ಪುರಾಣ ಪ್ರಸಿದ್ಧ ಜನರ ಆರಾಧ್ಯ ದೈವ ಪಟ್ಟಣದ ಹಳೇ ಎಡತೊರೆಯ ಅರ್ಕೇಶ್ವರ ಸ್ವಾಮಿ ತೆಪ್ಪೋತ್ಸವ ಸೋಮವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು.

    ಫೆ.1 ರಂದು ನಡೆದ ಬ್ರಹ್ಮರಥೋತ್ಸವದ ಅಂಗವಾಗಿ ಸೋಮವಾರ ತೆಪ್ಪೋತ್ಸವ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ರುದ್ರಾಭೀಷೇಕ ಸೇರಿದಂತೆ ವಿವಿಧ ಪೂಜೆ ಪುರಸ್ಕಾರಗಳು ನಡೆದು, ರಾತ್ರಿ ಧಾರ್ಮಿಕ ವಿಧಿ ವಿಧಾನಗಳಂತೆ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಗಳನ್ನು ಹೊತ್ತು ಮೆರವಣಿಗೆಯಲ್ಲಿ ತಂದು, ಕಾವೇರಿ ನದಿಯಲ್ಲಿ ಅಲಂಕಾರಗೊಂಡಿದ್ದ ತೆಪ್ಪದಲ್ಲಿ ಇರಿಸಲಾಯಿತು.
    ನಂತರ ತಹಸೀಲ್ದಾರ್ ಎಂ.ಮಂಜುಳಾ ಪೂಜೆಸಲ್ಲಿಸಿದರು. ಜಯ ಘೋಷಗಳೊಂದಿಗೆ ತೆಪ್ಪೋತ್ಸವ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts