More

    ಶೀಘ್ರದಲ್ಲೆ ನಿವೃತ್ತ ನೌಕರರಿಗೆ ಜ್ಯೋತಿ ಸಂಜೀವಿನಿ ಲಭ್ಯ

    ಸಾಗರ: ಅತಿ ಶೀಘ್ರದಲ್ಲಿ ನಿವೃತ್ತ ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆ ಸಿಗಲಿದ್ದು ಈ ಕುರಿತು ಮುಖ್ಯಂತ್ರಿಗಳು ಭರವಸೆ ನೀಡಿದ್ದಾರೆ. ಈ ಕುರಿತು ನಮ್ಮ ಸಂಘಟನೆ ಮನವಿ ಕೂಡ ಸಲ್ಲಿಸಿತ್ತು ಎಂದು ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಿ.ಎಂ.ಚAದ್ರಶೇಖರ್ ಹೇಳಿದರು.
    ನಗರದ ಸಾಹಿತ್ಯ ಭವನದಲ್ಲಿ ಭಾನುವಾರ ನಿವೃತ್ತ ನೌಕರರ ಸಂಘದಿAದ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅನೇಕ ವರ್ಷಗಳಿಂದ ನಿವೃತ್ತ ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೊಳಿಸಲು ಒತ್ತಾಯಿಸುತ್ತಿದ್ದು ಅದರ ಅನುಷ್ಠಾನಕ್ಕೆ ಕಾಲ ಸಮೀಪಿಸಿದೆ ಎಂದರು.
    ಅನೇಕ ವರ್ಷಗಳಿಂದ ನಮ್ಮ ಸಂಘ ನಿವೇಶನಕ್ಕೆ ಬೇಡಿಕೆ ಇಟ್ಟಿದ್ದು ಸ್ಥಳೀಯ ಆಡಳಿತ ನಿವೇಶನ ನೀಡಲು ಮೀನಮೇಷ ಎಣಿಸುತ್ತಿದೆ. ನಿವೃತ್ತ ನೌಕರರ ಚಟುವಟಿಕೆಗೆ ಭವನದ ಅಗತ್ಯವಿದೆ. ಈ ಬಗ್ಗೆ ಜಿಲ್ಲಾಽಕಾರಿಗಳಿಗೂ ಮನವಿ ಮಾಡಲಾಗುವುದು. ನಗರದಲ್ಲಿ ನಿವೃತ್ತ ನೌಕರರ ಸಂಘ ಸಕ್ರಿಯವಾಗಿ ತೊಡಗಿಕೊಂಡಿದ್ದು ಊರಿನ ಎಲ್ಲ ಕಾರ್ಯಕ್ರಮಗಳಲ್ಲಿಯೂ ಸಹಕಾರ ನೀಡುತ್ತಿದೆ ಎಂದರು.
    ನಿವೃತ್ತರು-ಪ್ರವೃತ್ತರು ವಿಷಯ ಕುರಿತು ಭದ್ರಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತç ವಿಭಾಗದ ಉಪನ್ಯಾಸಕ ಡಾ. ಟಿ.ಪ್ರಸನ್ನ ಮಾತನಾಡಿ, ನಿವೃತ್ತರಿಗೆ ಸೌಲಭ್ಯ ಕಲ್ಪಿಸುವಲ್ಲಿ ಜಗತ್ತಿನಲ್ಲಿ ಭಾರತ ೪೪ನೇ ಸ್ಥಾನದಲ್ಲಿದೆ. ನಿವೃತ್ತ ನೌಕರರನ್ನು ಹೆಚ್ಚು ಗೌರವಿಸುವ ಪಟ್ಟಿಯಲ್ಲಿ ನಾರ್ವೆ ಪ್ರಥಮ ಸ್ಥಾನದಲ್ಲಿದೆ. ನಮ್ಮಲ್ಲೂ ನಿವೃತ್ತರಿಗೆ ಅಗತ್ಯ ಸಹಕಾರ ನೀಡಿ ಅವರನ್ನು ಗೌರವಿಸುವ ಪರಿಪಾಠ ಬೆಳೆಯಬೇಕು. ಹಿರಿಯರ ಅನುಭವದಿಂದ ಕಿರಿಯರು ಬದುಕು ಕಟ್ಟಿಕೊಳ್ಳಲು ದಾರಿದೀಪ ಎಂದು ಹೇಳಿದರು.
    ಸಂಘದ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ಮಾತನಾಡಿ, ನಿವೃತ್ತ ನೌಕರರ ಸಂಘ ನಿವೃತ್ತ ನೌಕರರ ಹಿತಕಾಯುವಲ್ಲಿ ತನ್ನದೇ ಹಂತದಲ್ಲಿ ಕೆಲಸ ಮಾಡುತ್ತಿದೆ. ಅಲ್ಲದೆ, ಸಮಾಜದಲ್ಲಿ ೬೦ ವರ್ಷ ಮೇಲ್ಪಟ್ಟ ಎಲ್ಲರಿಗೂ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿದೆ ಎಂದರು.
    ಹಿರಿಯ ನ್ಯಾಯವಾದಿ ಟಿ.ಬಿ.ಮಂಜುನಾಥ ಶೆಟ್ಟಿ, ಹಿರಿಯ ಸಹಕಾರ ಅಲ್ಬರ್ಟ ವಿಕ್ಟರ್ -Àರ್ನಾಂಡಿಸ್, ನಾಟಿ ವೈದ್ಯ ಭೀಮನೇರಿ ಹುಚ್ಚಪ್ಪ, ಸಂಘದ ಮಾಜಿ ಕಾರ್ಯದರ್ಶಿ ಎಸ್.ಎನ್.ಮಂಜಪ್ಪ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
    ತಾಲೂಕು ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ, ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಾ.ಸ.ನಂಜುAಡಸ್ವಾಮಿ ಗೌರವಾಧ್ಯಕ್ಷ ಎಸ್.ಬಸವರಾಜ್, ಎಂ.ರಾಮಪ್ಪ, ಸರೋಜಮ್ಮ, ಸತ್ಯನಾರಾಯಣ, ಸೋಮರಾಜ್, ಎಂ.ಸಿ.ಪರಶುರಾಮಪ್ಪ, ಸುಬ್ರಹ್ಮಣ್ಯ ಭಟ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts