More

    ಕಾತರಕಿಯಲ್ಲಿ ಜ್ಯೋತಿ ಯಾತ್ರೆ ಅದ್ದೂರಿ ಸ್ವಾಗತ

    ಬೀಳಗಿ: ಮತಕ್ಷೇತ್ರ ವ್ಯಾಪ್ತಿಯ ಕಲಾದಗಿ ಕಂ ಕಾತರಕಿ ಬ್ರಿಜ್ ಮಾರ್ಗವಾಗಿ ಫೆ. 21 ರಂದು ಕಾತರಕಿ ಗ್ರಾಮಕ್ಕೆ ಕರ್ನಾಟಕ ಸಂಭ್ರಮದ ಜ್ಯೋತಿ ಯಾತ್ರೆ ಆಗಮಿಸಲಿದ್ದು, ತಾಪಂ, ಶಿಕ್ಷಣ ಇಲಾಖೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಗುವುದೆಂದು ಗ್ರೇಡ್-2 ತಹಸೀಲ್ದಾರ್ ಆನಂದ ಕೊಲ್ಹಾರ ಹೇಳಿದರು.

    ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾತರಕಿಯಲ್ಲಿ ಬೆಳಗ್ಗೆ 9.30 ಗಂಟೆಗೆ ಭವ್ಯ ಮೆರವಣಿಗೆ ನಡೆಸಿ ನಂತರ ಕುಂದರಗಿ, ತಮುರಮಟ್ಟಿ ಕ್ರಾಸ್, ಬೀಳಗಿ ಕ್ರಾಸ್, ಬಾಡಗಂಡಿ ಮೂಲಕ ಬೀಳಗಿಗೆ ಆಗಮಿಸಿ ವಾಸ್ತವ್ಯ ಹೂಡಲಿದೆ. ಫೆ.22 ರಂದು ಬೆಳಗ್ಗೆ 9.30 ಗಂಟೆಗೆ ತಾಲೂಕು ಆಡಳಿತ ಭವನದಿಂದ ಕರ್ನಾಟಕ ರಂಥಯಾತ್ರೆ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಬಳಿಕ ಯಡಹಳ್ಳಿ ಮಾರ್ಗವಾಗಿ ಮುಧೋಳ ತಾಲೂಕಿಗೆ ಬೀಳ್ಕೊಡಲಾಗುವುದೆಂದು ತಿಳಿಸಿದರು.

    ಆಯಾ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಥಯಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

    ತಾಪಂ ಇಒ ಅಭಯಕುಮಾರ ಮೂರಬ, ಬಿಇಒ ಎಸ್.ಆರ್. ಆದಾಪುರ, ಪಪಂ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ, ಬಿಆರ್‌ಸಿ ಶಿವಾಜಿ ಕಾಂಬಳೆ, ಸಿಡಿಸಿಒ ಬಿ.ಜಿ. ಕವಟೆಕರ, ಪಿಎಸ್‌ಐ ಎ.ಕೆ. ನಾಡಗೌಡರ, ಅನಗವಾಡಿ ಉಪತಹಸೀಲ್ದಾರ್ ಆರ್.ಬಿ. ಪಾತರದ, ಕಸಾಪ ಅಧ್ಯಕ್ಷ ಗುರುರಾಜ ಲೂತಿ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಗಂಗಾಧರ ಉಗ್ರಾಣ, ಬೀಳಗಿ ಕಂದಾಯ ನಿರೀಕ್ಷಕ ಮಂಜುನಾಥ ಧರೆಗೊಂಡ ಮತ್ತಿತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts